ಸರ್ಕಾರಿ ಸೌಲಭ್ಯ ಕಾರ್ವಿುಕರಿಗೆ ತಲುಪಿಸಲು ಶ್ರಮಿಸಿ

kmt Sanchari
Published on

ಕುಮಟಾ: ಕಾರ್ವಿುಕರು ದೇಶದ ಬೆನ್ನೆಲುಬು. ಎಷ್ಟೋ ಸಂದರ್ಭದಲ್ಲಿ ಪ್ರಾಣದಾಸೆ ಬಿಟ್ಟು ಕೆಲಸ ಮಾಡುವ ಕಾರ್ವಿುಕರ ಶ್ರಮದ ಬದುಕು ನಿಜಕ್ಕೂ ಮೆಚ್ಚುವಂಥದ್ದು. ಕಾರ್ವಿುಕರ ರಕ್ಷಣೆ ಎಷ್ಟು ಮುಖ್ಯವೋ ಅವರಿಗೆ ಅಗತ್ಯವಾದ ನೆರವನ್ನು ನೀಡುವುದೂ ಅಷ್ಟೇ ಮುಖ್ಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿಯ ವತಿಯಿಂದ ಕಾರ್ವಿುಕ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ ನೀಡಿ ಕಾರ್ವಿುಕರಿಗೆ ಸುರಕ್ಷಾ ಕಿಟ್ ವಿತರಿಸಿ ಮಾತನಾಡಿದರು ಕಾರ್ವಿುಕರಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ತಲುಪಿಸುವ ಜವಾಬ್ದಾರಿ ಕಾರ್ವಿುಕ ಅಧಿಕಾರಿಗಳದ್ದು. ಕಾರ್ವಿುಕರು ಯಾವುದೇ ತೊಂದರೆ ಇದ್ದಲ್ಲಿ ತಿಳಿಸಿದರೆ ಪರಿಹರಿಸಲು ಯತ್ನಿಸುತ್ತೇನೆ ಎಂದರು.

ಕ್ಷೇತ್ರದ ಆರೋಗ್ಯ, ಶಿಕ್ಷಣ ಸಂಬಂಧಿಸಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಳಾದ ರಸ್ತೆ ದುರಸ್ತಿ ಕಾರ್ಯವನ್ನು ಮಳೆಗಾಲ ಮುಗಿದ ನಂತರ ಮಾಡಲಾಗುವುದು ಎಂದರು. ತಾಪಂ ಇಒ ರಾಜೇಂದ್ರ ಭಟ್ಟ, ಪುರಸಭೆ ಅಧ್ಯಕ್ಷೆ ಸುಮತಿ ಭಟ್ಟ, ಸ್ಥಾಯಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಗೌಡ, ಮೋಹಿನಿ ಗೌಡ, ಕಾರ್ವಿುಕ ನಿರೀಕ್ಷಕ ಡಿ.ಎಂ. ವೆಂಕಟೇಶ ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net