ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿ

03 KLR 08
module: NormalModule; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 80.0;
Published on

ಕೋಲಾರ: ವೇಮಗಲ್​-&ಕುರಗಲ್​ ಪಟ್ಟಣ ಪಂಚಾಯಿತಿಗೆ ಆ.17 ರಂದು ನಡೆಯುವ ಚುನಾವಣೆಯಲ್ಲಿ ಪಪಂನ 17 ವಾರ್ಡ್​ಗಳಿಗೂ ಜೆಡಿಎಸ್​ ಮತ್ತು ಬಿಜೆಪಿಯಿಂದ ಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದ್ದು, ಎಲ್ಲರೂ ಗೆಲುವು ಸಾಧಿಸಲಿದ್ದಾರೆ ಎಂದು ಸಂಸದ ಎಂ.ಮಲ್ಲೇಶ್​ಬಾಬು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್​ ಮುಖಂಡ ಸಿ.ಎಂ.ಆರ್​.ಶ್ರೀನಾಥ್​ ಅವರ ನಗರದ ಗೃಹ ಕಚೇರಿಯಲ್ಲಿ ಎರಡು ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜೆಡಿಎಸ್​ ಮತ್ತು ಬಿಜೆಪಿಯಿಂದ ಪಟ್ಟಣ ಪಂಚಾಯಿತಿಗೆ ಗೆಲ್ಲುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದ್ದೇವೆ. ಎರಡು ಪಕ್ಷಗಳ ಎಲ್ಲ ಮುಖಂಡರು ಈ ಚುನಾವಣೆಯಲ್ಲಿ ಸಂಘಟಿತರಾಗಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ವೇಮಗಲ್​ ಮತ್ತು ಕುರಗಲ್​ ಪಟ್ಟಣ ಪಂಚಾಯಿತಿಯ 17 ವಾರ್ಡ್​ಗಳಲ್ಲಿ ಎಲ್ಲ ಮತದಾರರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುವಂತಹ ಸೂಕ್ತವಾದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದ್ದೇವೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು 9 ವಾರ್ಡ್​ ಮತ್ತು ಜೆಡಿಎಸ್​ ಬೆಂಬಲಿತ ಅಭ್ಯರ್ಥಿಗಳನ್ನು 8 ವಾರ್ಡ್​ಗಳಲ್ಲಿ ಕಣಕ್ಕೆ ಇಳಿಸಲಾಗುವುದು. ಆಯಾಯಾ ಚಿಹ್ನೆಯಡಿ ಸ್ವರ್ಧಿಸಲಿದ್ದಾರೆ. ಎರಡು ಪಕ್ಷಗಳ ಮುಖಂಡರು ಮೈತ್ರಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದರು.

ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಗೆಲ್ಲುವ ಸಾಮರ್ಥ್ಯದ ಮಾನದಂಡದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದೇವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್​ ವಿರೋಧ ಅಲೆ ಇದ್ದು, ಬಿಜೆಪಿ ಮತ್ತು ಜೆಡಿಎಸ್​ ಪರವಾದ ಅಲೆ ಇದೆಯೆಂದು ಈಗಾಗಲೇ ಹಲವಾರು ಚುನಾವಣೆಗಳಲ್ಲಿ ಸಾಬೀತಾಗಿದ್ದು, ಈ ಚುನಾವಣೆಯು ಮುಂದಿನ ಪಂಚಾಯಿತಿ ಚುನಾವಣೆಗಳ ದಿಕ್ಸೂಚಿ ಆಗಲಿದೆ ಎಂದರು.

ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ನಾಮಪತ್ರ ಸಲ್ಲಿಕೆಗೆ ಆ.5 ರಂದು (ಮಂಗಳವಾರ) ಕೊನೆಯ ದಿನವಾಗಿದೆ. ಎನ್​ಡಿಎ ಮೈತ್ರಿಯಡಿ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎರಡು ಪಕ್ಷಗಳ ಹಿರಿಯ ಮುಖಂಡರ ಆಶೀರ್ವಾದದೊಂದಿಗೆ ಚುನಾವಣೆಯನ್ನು ನಿರ್ಭಯವಾಗಿ ಎದುರಿಸಲಿದ್ದೇವೆ. ಎರಡು ಪಕ್ಷಗಳ ಸಂಘಟನೆಯು ಸದೃಢವಾಗಿದೆ ಎಂದರು.

ಕಳೆದ 2 ವರ್ಷದಿಂದ ಕಾಂಗ್ರೆಸ್​ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಡ ಜನತೆ ಮೇಲೆ ತೆರಿಗೆಗಳ ಹೊರೆ ಹೇರಿರುವುದಕ್ಕೆ ಎಲ್ಲೆಡೆ ಅಕ್ರೋಶ ವ್ಯಕ್ತವಾಗುತ್ತಿದ್ದು, ಎನ್​ಡಿಎ ಅಲೆ ಸುನಾಮಿಯಂತೆ ಹರಿದು ಬರಲಿದೆ. ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಮಾಜಿ ಸಂಸದ ಎಸ್​.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್​, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಮಂಜುನಾಥ್​ ಗೌಡ, ಮುಖಂಡರಾದ ಸಿ.ಎಂ.ಆರ್​. ಶ್ರೀನಾಥ್​, ಬೆಗ್ಲಿ ಸೂರ್ಯಪ್ರಕಾಶ್​, ಬಣಕನಹಳ್ಳಿ ನಟರಾಜ್​, ಬಾಬು ಮೌನಿ, ವಡಗೂರು ರಾಮು, ಬಂಕ್​ ಮಂಜುನಾಥ್​, ಸಿ.ರಾಕೇಶ್​ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net