

ಮುಂಡರಗಿ: ಶ್ರಮ ವಹಿಸಿ ದುಡಿದು ಸುಂದರ ಬದುಕು ಕಟ್ಟಿಕೊಳ್ಳಬೇಕು. 12ನೇ ಶತಮಾನದ ಶರಣರು ದುಡಿದುಣ್ಣುವ ಪ್ರವೃತ್ತಿ ಕಲಿಸಿಕೊಟ್ಟರು ಎಂದು ಪ್ರಾಚಾರ್ಯ ಡಾ.ಡಿ.ಸಿ. ಮಠ ಹೇಳಿದರು.
ಪಟ್ಟಣದ ಕ.ರಾ.ಬೆಲ್ಲದ ಕಾಲೇಜು ಸಭಾಭವನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಹಾಗೂ ಎಂ.ಎಸ್.ಡಂಬಳ ಹೆಣ್ಣು ಮಕ್ಕಳ ಪ್ರೌಢಶಾಲೆ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಚನ ದಿನ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಆರ್.ಎಲ್.ಪೊಲೀಸ್‌ಪಾಟೀಲ ಮಾತನಾಡಿ, ವಚನಗಳು ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡುತ್ತವೆ. ವಚನ ಸಾಹಿತ್ಯ ಎಂದರೆ ಜೀವನದ ಸಾಹಿತ್ಯವಾಗಿದೆ ಎಂದರು.
ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಎಂ.ಎಸ್. ಶಿವಶೆಟ್ಟರ, ಜೆ.ಟಿ.ಸರ್ಕಾರಿ ಪದವಿ ಕಾಲೇಜ್ ಕನ್ನಡ ಸಹಾಯಕ ಪ್ರಾಧ್ಯಾಪಕಿ ಕಾವೇರಿ ಬಿ., ಅಧ್ಯಕ್ಷತೆ ವಹಿಸಿದ್ದ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸೀತಾದೇವಿ ಬಸಾಪುರ ಮಾತನಾಡಿದರು. ಪ್ರೌಢಶಾಲೆ ಮುಖ್ಯಶಿಕ್ಷಕಿ ಎಂ.ಎ.ಜಾತಗೇರ, ಎಂ.ಜಿ. ಗಚ್ಚಣ್ಣವರ, ಆರ್.ವೈ. ಪಾಟೀಲ, ಕೊಟ್ರೇಶ ಜವಳಿ, ಕಳಕಪ್ಪ ಜಲ್ಲಿಗೇರಿ ಉಪಸ್ಥಿತರಿದ್ದರು.