ಸನಾತನ ಸಂಸ್ಕೃತಿ ಉಳಿವಿಗೆ ಶ್ರಮ

Kin_culture
Published on

ಕಿನ್ನಿಗೋಳಿ: ಆಧುನಿಕತೆಯ ಭರಾಟೆಯಲ್ಲಿ ಸನಾತನ ಸಂಸ್ಕೃತಿ, ಆಚಾರ ವಿಚಾರ ಮರೆಯಾಗುತ್ತಿಟಚಿ. ಇದನ್ನು ಉಳಿಸಿ ಮುಂದಿನ ತಲೆವಾರಿಗೆ ನೀಡಬೇಕಾಗಿದೆ. ಅದಕ್ಕಾಗಿ ಮಕ್ಕಳಿಗೆ ಭಗವದ್ಗೀತೆ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ವಾಜಿ ಸದಸ್ಯ ಈಶ್ವರ್ ಕಟೀಲ್ ಹೇಳಿದರು.

ಕಟೀಲು ಮಲ್ಲಿಗೆಯಂಗಡಿಯಲ್ಲಿ ನಂದಿನಿ ಯುವಕ ಮಂಡಲದ ಆಶ್ರಯದಲ್ಲಿ 33ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 16ನೇ ವರ್ಷದ ಭಜನಾ ಮಂಗಲೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಬಳಿಕ ಭಗವದ್ಗೀತೆ ತರಗತಿಗಳಿಗೆ ಚಾಲನೆ ನೀಡಲಾಯಿತು. ಯುಗಪುರುಷದ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೊಸಮನೆ, ಕುಂಜಿರಾಯ ದೈವಸ್ಥಾನದ ಮುಕ್ಕಾಲ್ದಿ ಜಯರಾಮ ಮುಕ್ಕಾಲ್ದಿ, ಕಟೀಲು ಶಾಲೆಯ ಶಿಕ್ಷಕ ಶ್ರೀವತ್ಸ ಎಸ್.ಆರ್., ಯತೀಶ್ ಮತ್ತಿತರರಿದ್ದರು.

ಶಿಕ್ಷಣ ಶ್ರೀವತ್ಸ ಎಸ್.ಆರ್., ನಾಟಕ ನಿರ್ದೇಶಕ ವಿಜಯ ಕುವಾರ್ ಶೆಟ್ಟಿ ಕೊಡಿಯಾಲ್‌ಬೈಲ್ ಹಾಗೂ ರಾಷ್ಟ್ರಮಟ್ಟದಲ್ಲಿ ಖೋ ಖೋದಲ್ಲಿ ದ್ವಿತೀಯ ಸ್ಥಾನ ಪಡೆದ ಎಕ್ಕಾರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದ ಬಾಲಕಿಯರನ್ನು ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ ಸ್ವಾಗತಿಸಿದರು. ದುರ್ಗಾಪ್ರಸಾದ್ ಕೊಂಡೇಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net