ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮ

PH 12
Published on

ಅಫಜಲಪುರ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಎಲ್ಲ ಸಚಿವರು, ಶಾಸಕರ ಜತೆ ಚರ್ಚಿಸಿದ್ದು, ಶಿP್ಷÀಣ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯP್ಷÀ ಡಾ.ಅಜಯಸಿಂಗ್ ಹೇಳಿದರು.

ಮಾಶಾಳದಲ್ಲಿ ಪ್ರವಾಸೋದ್ಯಮ ಇಲಾಖೆ, ಬಂಜಾರ ಅಭಿವೃದ್ಧಿ ನಿಗಮದಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ನಾವು ನುಡಿದಂತೆ ನಡೆಯುತ್ತಿz್ದೆÃವೆ. ನಮ್ಮ ಪ್ರದೇಶಕ್ಕೆ ಅಂಟಿಕೊAಟಿರುವ ಹಿಂದುಳಿದ ಭಾಗ ಎಂಬ ಹಣೆಪಟ್ಟಿ ತೆಗೆದು ಹಾಕಲು ಶಿಕ್ಷಣ ಇಲಾಖೆಗೆ ಬೇಕಾದ ಸೌಲಭ್ಯ ಕಲ್ಪಿಸಿ, ರಾಜ್ಯದ ಟಾಪ್ ಹತ್ತರಲ್ಲಿ ನಮ್ಮ ಭಾಗ ಇರುವಂತೆ ಯೋಜನೆ ಹಾಕಿಕೊಳ್ಳಲಾಗುವುದು. ಮಾಶಾಳ ಗ್ರಾಮಸ್ಥರು ಹಲವು ಬೇಡಿಕೆ ಇಟ್ಟಿದ್ದು, ಶಾಸಕರ ಜತೆಗೂಡಿ ಹಂತಹAತವಾಗಿ ಈಡೇರಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಶಾಸಕ ಎಂ.ವೈ.ಪಾಟೀಲï ಮಾತನಾಡಿ, ಡಾ.ಅಜಯಸಿಂಗ್ ಉತ್ಸಾಹಿ ಯುವಕರಾಗಿದ್ದು, ವಿಭಾಗದ ಎಲ್ಲ ಕಡೆಗೆ ಪ್ರವಾಸ ಮಾಡಿ ಕಲ್ಯಾಣ ಕರ್ನಾಟಕದ ಪ್ರಗತಿಗೆ ಧೃಢ ಸಂಕಲ್ಪ ಮಾಡಿz್ದÁರೆ ಎಂದು ಹೇಳಿದರು.

ಶ್ರೀ ಮುರಳಾರಾಧ್ಯ ಶಿವಾಚಾರ್ಯರು, ಶಾಸಕ ಅಲ್ಲಮಪ್ರಭು ಪಾಟೀಲï, ಗ್ರಾಪಂ ಅಧ್ಯಕ್ಷೆ ರಾಣುಬಾಯಿ ಚವ್ಹಾಣ್, ಉಪಾಧ್ಯP್ಷÀ ನಿಂಗಪ್ಪ ಪಾಟೋಳಿ, ಸದಸ್ಯ ಶಿವು ಪ್ಯಾಟಿ, ಪ್ರಮುಖರಾದ ಜೆ.ಎಂ.ಕೊರಬು, ಬಾಬಾಸಾಹೇಬ ಪಾಟೀಲï, ರಮೇಶ ಪೂಜಾರಿ, ರಾಜಕುಮಾರ ಬಬಲಾದ, ಮರೆಪ್ಪ ಮುಗಳಿ, ಸಂತೋಷ ರಾಠೋಡ್, ವಿನೋದ ಜಮಾದಾರ, ಪ್ರಕಾಶ ಜಮಾದಾರ, ಶಿವರುದ್ರಪ್ಪ ಅವಟೆ, e್ಞÁನೇಶ್ವರಿ ಪಾಟೀಲï, ದುಂಡಪ್ಪ ಜಮಾದಾರ, ಶಿವಣ್ಣ ಪಾರಗೊಂಡ, ಶಾಂತಯ್ಯ ಝಳಕಿಮಠ, ಸಿದ್ದು ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net