ಕಾಮಗಾರಿ ವಿಳಂಬದಿಂದ ಸಂಚಾರಕ್ಕೆ ಸಮಸ್ಯೆ

06 gvt 03
ಗಂಗಾವತಿ, ಕಡೇಬಾಗಿಲು ಸಂಪರ್ಕದ ರಸ್ತೆ ದುರಸ್ತಿ ಕಾಮಗಾರಿ ವಿಳಂಬದಿಂದ ಸಂಗಾಪುರದ ಕಿರುಸೇತುವೆ ಕಾಮಗಾರಿ ಬಳಿ ಕೆಕೆಆರ್‌ಟಿಎಸ್ ಬಸ್ ಸಿಕ್ಕಿ ಹಾಕಿಕೊಂಡಿರುವುದು.
Published on

ಗಂಗಾವತಿ: ಗಂಗಾವತಿ, ಕಡೇಬಾಗಿಲು ಸಂಪರ್ಕದ ರಸ್ತೆ ದುರಸ್ತಿ ಕಾಮಗಾರಿ ವಿಳಂಬದಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕಾಮಗಾರಿ ಆರಂಭಿಸಿ 10 ತಿಂಗಳಾದರೂ ಇನ್ನೂ ಪೂರ್ಣಗೊಳ್ಳು ಲಕ್ಷಣ ಗೋಚರಿಸುತ್ತಿಲ್ಲ.

ವಿಶೇಷ ಅನುದಾನದಡಿ ಗಂಗಾವತಿ ಸಾಯಿಬಾಬಾ ದೇವಾಲಯದಿಂದ ಕಡೇಬಾಗಿಲುವರೆಗಿನ ರಸ್ತೆ ದುರಸ್ತಿಗೆ 20 ಕೋಟಿ ರೂ.ಮಂಜೂರಾಗಿದ್ದು, ಲೋಕೋಪಯೋಗಿ ಇಲಾಖೆ ನಿರ್ವಹಣೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕುಡಿವ ನೀರಿನ ಪೈಪ್‌ಲೈನ್, ಅರಣ್ಯ ಇಲಾಖೆ ತಕರಾರುನಿಂದ 7 ಕಿ.ಮೀ.ಉದ್ದ ರಸ್ತೆ 10 ತಿಂಗಳಾದರೂ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಇದುವರಿಗೂ 5 ಕಿ.ಮೀ. ವ್ಯಾಪ್ತಿಯ ರಸ್ತೆ ಮಾತ್ರ ಶೇ.70 ಪೂರ್ಣಗೊಂಡಿದ್ದು, ಉಳಿದಿದ್ದು ಇನ್ನೂ ಆರಂಭಿಸಿಲ್ಲ.

ಉದ್ದೇಶಿತ ರಸ್ತೆಯಲ್ಲಿ ಬರುವ ಕಿರುಸೇತುವೆ, ಕಲ್ವರ್ಟ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆಯಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಅಪಘಾತ ಹೆಚ್ಚುತ್ತಿವೆ. ಅಧಿಕಾರಿಗಳ ಸೂಚನೆಗೆ ಗುತ್ತಿಗೆದಾರರ ಸ್ಪಂದಿಸುತ್ತಿಲ್ಲ, ಜನಪ್ರತಿನಿಧಿಗಳು ಗಂಭೀರ ಪರಿಗಣಿಸುತ್ತಿಲ್ಲ.

ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳಲ್ಲಿ ಉತ್ತರವಿಲ್ಲ, ಗುತ್ತಿಗೆದಾರರು ಸ್ಥಳಕ್ಕೆ ಬರುತ್ತಿಲ್ಲ. ಕ್ಷೇತ್ರದ ಜನತೆ ಹಲವು ನಿರೀಕ್ಷೆ ಮೇಲೆ ಗೆಲ್ಲಿಸಿರುವ ಶಾಸಕ ಗಾಲಿ ಜನಾರ್ದನರೆಡ್ಡಿ ಕಾಮಗಾರಿ ವಿಳಂಬದ ಬಗ್ಗೆ ಮೌನವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಪಿಡಬ್ಲುೃಡಿ ಎಇಇ ಜೆ.ವಿಶ್ವನಾಥ ಪ್ರತಿಕ್ರಿಯಿಸಿ, ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದು, ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಕೂಲಿಕಾರರು ಬಾರದಿದ್ದರಿಂದ ಕೆಲಸ ಸ್ಥಗಿತಗೊಂಡಿದೆ. ವಾರದೊಳಗೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net