ಪಕ್ಷದ ಬಲವರ್ಧನೆಗೆ ಹಗಲಿರುಳು ಶ್ರಮಿಸಿ

05M.D.R.4
ಮದ್ದೂರು ವಿಧಾನಸಭಾ ಕ್ಷೇತ್ರದ ಮದ್ದೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ತೈಲೂರು ಚಲುವರಾಜು ಅವರು ಶಾಸಕ ಕೆ.ಎಂ.ಉದಯ್ ಅಭಿನಂದಿಸಿದರು. ಅರುಣ್‌ಕುಮಾರ್, ಸೋಮಣ್ಣ, ಕೃಷ್ಣ, ಅಣ್ಣಯ್ಯ, ವಾಸು, ಶಿವಪ್ಪ, ಅಂಕಪ್ಪ, ಪುಟ್ಟಪ್ಪ, ಶ್ರೀನಿವಾಸ್ ಇದ್ದರು.
Published on

ಮದ್ದೂರು: ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ತೈಲೂರು ಚೆಲುವರಾಜು ಅವರು ಬುಧವಾರ ಶಿವಪುರ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಕೆ.ಎಂ.ಉದಯ್ ಅವರನ್ನು ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಎಂ.ಉದಯ್, ಚೆಲುವರಾಜು ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಯ್ಕೆ ಮಾಡಿದ್ದು, ಪಕ್ಷದ ಬಲವರ್ಧನೆಗೆ ಹಗಲಿರುಳು ಶ್ರಮಿಸಿ ಪಕ್ಷ ಸಂಘಟನೆಗೆ ಮುಂದಾಗುವಂತೆ ಕಿವಿ ಮಾತು ಹೇಳಿದರು.

ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು ಮಾತನಾಡಿ, ಪಕ್ಷ ಸಂಘಟನೆಗಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ಮುಖಂಡರಾದ ಸೋಮಣ್ಣ, ಕೃಷ್ಣ, ಅಣ್ಣಯ್ಯ, ವಾಸು, ಶಿವಪ್ಪ, ಅಂಕಪ್ಪ, ಪುಟ್ಟಪ್ಪ, ಶ್ರೀನಿವಾಸ್, ಬಸವ, ಗುರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net