ಕೆಲಸಕ್ಕಾಗಿ ಬರುವುದಾಗಿ ಜಮ್ಮು-ಕಾಶ್ಮೀರದ ವ್ಯಕ್ತಿಯಿಂದ ವಂಚನೆ

Crime Logo
Published on

ಹಾನಗಲ್ಲ: ಕಣ್ಣಿನ ಗಾಣದ ಕೆಲಸಕ್ಕೆ ಬರುವುದಾಗಿ ನಂಬಿಸಿ ಜಮ್ಮು-ಕಾಶ್ಮೀರದ ವ್ಯಕ್ತಿಯೊಬ್ಬ ಇಲ್ಲಿಯ ವ್ಯಾಪಾರಸ್ಥರೊಬ್ಬರಿಂದ 2.25 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ಇಲ್ಲಿಯ ಆಡೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಮ್ಮು ಕಾಶ್ಮೀರದ ಕಿಸ್ತವಾರ್​ ಬೇನೂರ ಬುಂಜವಾ ಗ್ರಾಮದ ಜಾಕೀರಹುಸೇನ ನಜೀರಅಹ್ಮದ್​ ಜೀವಾರ ವಂಚಿಸಿರುವ ಆರೋಪಿ.

ಈತ ತಾಲೂಕಿನ ಬಾಳಂಬೀಡ ಗ್ರಾಮದ ಮಿಯ್ಯಾಜಾನ್​ ಎಂಬುವರಿಗೆ ಕುಟುಂಬ ಸಮೇತ ಕೆಲಸಕ್ಕಾಗಿ ಬರುವುದಾಗಿ ಹೇಳಿ ಮುಂಗಡವಾಗಿ ಫೋನ್​ ಪೇ ಮೂಲಕ 2.25 ಲಕ್ಷ ರೂ. ಹಾಕಿಸಿಕೊಂಡಿದ್ದಾನೆ. ನಂತರ ಕೆಲಸಕ್ಕೆ ಬಾರದೆ ಹಾಗೂ ಹಣ ವಾಪಸ್​ ಕೊಡದೆ ಮೋಸ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net