

ಕುರುಗೋಡು: ಗ್ರಾಪಂ ಮಟ್ಟದಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.
ಇದನ್ನೂ ಓದಿ: ರಸ್ತೆ ಸುಧಾರಣೆ ಕಾಮಗಾರಿ ಶೀಘ್ರ ಆರಂಭ
ತಾಲೂಕಿನ ದಮ್ಮೂರು, ಸೋಮಸಮುದ್ರ, ಯರಂಗಳ್ಳಿ, ಬಾದನಹಟ್ಟಿ ಸೇರಿ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಕೈಗೊಂಡ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ನರೇಗಾ ಮತ್ತು ತೋಟಗಾರಿಕೆ ಇಲಾಖೆಯಿಂದ ನಡೆಯುವ ಕಾಮಗಾರಿಗಳಲ್ಲಿ ಯಾವುದೇ ರೀತಿ ಲೋಪವಾಗದಂತೆ ನಿಗಾವಹಿಸುವ ಮೂಲಕ ಪ್ರತಿಯೊಬ್ಬ ರೈತನಿಗೂ ಅನುಕೂಲವಾಗುವಂತೆ ಮಾಡಬೇಕು ಎಂದು ಸೂಚಿಸಿದರು.
ನಂತರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ಮಳೆ ನೀರು ಕೊಯ್ಲು, ಆಸ್ತಿ ತೆರಿಗೆ, ವಸೂಲಾತಿ, ರಸ್ತೆ ಬದಿ ಗಿಡಗಳ ನೆಡುವಿಕೆ, ಪಪ್ಪಾಯಿ ಬೆಳೆ, ಗುಲಾಬಿ ಹಾಗೂ ಮಹಾಗನಿ ಬೆಳೆ ಪರಿಶೀಲಿಸಿದರು. ಕಾಮಗಾರಿಗಳ ಕಡತ, ಗುಣಮಟ್ಟ ಅಳತೆ ಪರಿಶೀಲನೆ ಮಾಡಿದರು. ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ, ಪ್ರಮುಖ ಚಂದ್ರಶೇಖರ ಇದ್ದರು.