

ಸಂಶಿ: ವಾಸ್ತವ ಬದುಕಿನ ಸತ್ಯತೆ ತಿಳಿಸುವ ಪ್ರಮುಖ ಘಟ್ಟವೇ ಸಾಹಿತ್ಯ. ಪ್ರತಿಯೊಬ್ಬರೂ ಕನ್ನಡ ನಾಡು-ನುಡಿ ಗೌರವಿಸಬೇಕಿದೆ ಎಂದು ಶಸಾಪ ತಾಲೂಕಾಧ್ಯಕ್ಷ ಎಸ್.ಸಿ. ಶಾನವಾಡ ಹೇಳಿದರು.
ಶರಣ ಸಾಹಿತ್ಯ ಪರಿಷತ್, ಕೇಂದ್ರ ಸಾಹಿತ್ಯ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ ಮತ್ತು ಗುಡಗೇರಿ ಫಚಮ ಕಾಲೇಜು ಆಶ್ರಯದಲ್ಲಿ ಸಮೀಪದ ಗುಡಗೇರಿ ಗ್ರಾಮದ ಫಚಮ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ದತ್ತಿ ಸಾಹಿತ್ಯದ ಕುರಿತು ಅವರು ಉಪನ್ಯಾಸ ನೀಡಿದರು. 770 ಬಸವಾದಿ ಶರಣರು ಸಂಸತ್ತಿನ ಮೊದಲ ಗುರುಗಳಾಗಿದ್ದು, ವಚನಗಳೇ ನಮ್ಮ ಮತಿಗೆ ದಾರಿದೀಪವಾಗಿವೆ. ಎಲ್ಲರೂ ಒಂದೇ ಎಂಬ ಭಾವ ಬೆಳೆಸುವ ಸಾಹಿತ್ಯ ಒಳಗೊಂಡ ಪುಸ್ತಕಗಳನ್ನು ನಾವು ಮರೆಯುವಂತಿಲ್ಲ. ಆದರೆ, ಮೊಬೈಲ್ನಿಂದ ಇಂದು ನಮ್ಮ ಸಂಬಂಧಗಳು ಹಳಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಖ್ಯೋಪಾಧ್ಯಾಯ ಸಿ.ಟಿ. ತಿಮ್ಮನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರಕ್ಕೆ ಮಾದರಿ ಕರ್ನಾಟಕ, ರಾಜ್ಯಕ್ಕೆ ಮಾದರಿ ಧಾರವಾಡ ಜಿಲ್ಲೆ, ಜಿಲ್ಲೆಗೆ ಮಾದರಿ ಕುಂದಗೋಳ ತಾಲೂಕು. ಇಂತಹ ಕಲೆ-ಸಾಹಿತ್ಯ-ಸಂಗೀತದ ತವರೂರನ್ನು ಎಂದೂ ಮರೆಯದಿರಿ ಎಂದು ವಿದ್ಯಾರ್ಥಿಗಳಲ್ಲಿ ಕಿವಿಮಾತು ಹೇಳಿದರು.
ಶಸಾಪ ಜಿಲ್ಲಾ ಗೌರವಾಧ್ಯಕ್ಷ ಜಿ.ಡಿ. ಘೊರ್ಪಡೆ, ಚುಸಾಪ ತಾಲೂಕಾಧ್ಯಕ್ಷ ವೈ.ಡಿ. ಹೊಸೂರ, ಸಾಹಿತಿ ಎಂ.ಆರ್. ನದಾಫ, ಶಸಾಪ ತಾಲೂಕು ಕಾರ್ಯಾಧ್ಯಕ್ಷ ಎಸ್.ಕೆ. ಪ್ಯಾಟಿ, ಎಲ್.ಬಿ. ಸರಾವರಿ, ಪ್ರಾಚಾರ್ಯ ಪಿ.ಕೆ. ಕಮ್ಮಾರ, ಶಸಾಪ ಉಪಾಧ್ಯಕ್ಷ ರಾಘವೇಂದ್ರ ನರ್ತಿ, ಇತರರಿದ್ದರು.