

ಕಾರ್ಕಳ: ಜಗತ್ತಿನ ಮಹಾಕಾವ್ಯ ರಾಮಾಯಣದ ಮೂಲ ಕರ್ತೃ ವಾಲ್ಮೀಕಿಯವರು. ಅವರ ನಂತರ ಅದೆಷ್ಟೋ ಜನ ರಾಮಾಯಣ ಬರೆದರೂ ಎಲ್ಲಕ್ಕೂ ಮೂಲ ಆಧಾರ ವಾಲ್ಮೀಕಿ ರಾಮಾಯಣವೇ ಆಗಿದೆ. ಇಂದಿನ ಯುವಜನತೆಗೆ ಒಳ್ಳೆಯ ಹಾದಿಯಲ್ಲಿ ನಡೆಯಲು ಅದ್ಭುತ ಸಂದೇಶವನ್ನು ಮಹರ್ಷಿ ನೀಡಿದ್ದಾರೆ ಎಂದು ಕಾರ್ಕಳ ತಹಸೀಲ್ದಾರ್ ಪ್ರತಿಭಾ ಆರ್. ಹೇಳಿದರು.
ಕಾರ್ಕಳ ತಾಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು.
ಭಗವಂತನ ನಾಮಸ್ಮರಣೆ ಮೂಲಕ ಆದಿಕವಿಯಾಗಿ ರೂಪುಗೊಂಡು ಜಗತ್ತಿಗೇ ಅತ್ಯದ್ಭುತ ರಾಮಾಯಣ ನೀಡಿದ ಕತೆ ಎಂದೆಂದಿಗೂ ಸ್ಫೂರ್ತಿದಾಯಕ ಎಂದರು. ಸಮಾಜ ಕಲ್ಯಾಣ ಇಲಾಖಾಧಿಕಾರಿ ರಾಘವೇಂದ್ರ, ಉಪತಹಸೀಲ್ದಾರ್ ಮಂಜುನಾಥ್, ಇತರ ಸಿಬ್ಬಂದಿ ಉಪಸ್ಥಿತರಿದ್ದರು.