

ದೊಡ್ಡಬಳ್ಳಾಪುರ: ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ 18ನೇ ಯೋಗಾಸನ ಸ್ಫೋರ್ಟ್ಸ್ ಚಾಂಪಿಯನ್ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ವಿವಿಧ ವಿಭಾಗದಲ್ಲಿ ಬಹುಮಾನ ಗಳಿಸಿದ್ದಾರೆ. ಸ್ಪರ್ಧೆಯ 14ರಿಂದ 16 ವರ್ಷದ ಬಾಲಕಿಯರ ವಿಭಾಗದಲ್ಲಿ ಎಂ.ಆರ್.ಜಾಹ್ನವಿ ಬೆಳ್ಳಿ ಪದಕ ಪಡೆದಿದ್ದಾರೆ. ಡಿ.ಎಸ್.ಮಧು ಶಾಲಿನಿ 4ನೇ ಸ್ಥಾನ ಗಳಿಸಿದ್ದಾರೆ. 8ರಿಂದ 18 ವರ್ಷದ ಬಾಲಕಿಯರ ವಿಭಾಗದ ರಿದಮಿಕ್ ಯೋಗಾಸನ ಸ್ಪರ್ಧೆಯಲ್ಲಿ ಎಸ್.ಖುಷಿಪ್ರಿಯಾ ಮತ್ತು ಕೆ.ಎಂ.ಹಿತಶ್ರೀ ಐದನೇ ಸ್ಥಾನ ಪಡೆದಿದ್ದಾರೆ. 8ರಿಂದ 18 ವರ್ಷದ ಬಾಲಕರ ವಿಭಾಗದಲ್ಲಿ ರಿವೇರ್ಮಿಕ್ ಫೀರ್ 4ನೇ ಸ್ಥಾನ ಪಡೆದಿದ್ದಾರೆ. ಆರ್ಟಿಸ್ಟಿಕ್ಸ್ ಯೋಗ ಸ್ಪರ್ಧೆಯಲ್ಲಿ ಪ್ರಥಮ್ ಶೆಟ್ಟಿ ಹಾಗೂ ಹಿತೇಶ್ 6ನೇ ಸ್ಥಾನ ಪಡೆದಿದ್ದಾರೆ.