ಬಕೆಟ್​ ಇನ್​ ದಿ ಬಾಲ್​ ಹಾಕಿ ಕುಪ್ಪಳಿಸಿದ ಮಹಿಳೆಯರು

WomensDay_SPorts
Published on

ತುಮಕೂರು: ಲೆಮೆನ್​ ಆ್ಯಂಡ್​ ಸ್ಪೂನ್​, ಬಕೆಟ್​ ಇನ್​ ದಿ ಬಾಲ್​, ಸೂಜಿ ದಾರ ಪೋಣಿಸುವುದು ಹೀಗೆ.. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಹೆಣ್ಣುಮಕ್ಕಳು ಭಾಗವಹಿಸಿ ಸಂಭ್ರಮಿಸಿದರಲ್ಲದೆ, ಪ್ರಶಸ್ತಿ ಗೆದ್ದುಕೊಂಡರು.

13 ರಿಂದ 15 ವರ್ಷದೊಳಗಿನ ಬಾಲಕಿಯರು ಮ್ಯೂಸಿಕಲ್​ ಚೇರ್​ನಲ್ಲಿ ಎಸ್​.ಎಂ.ರುಚಿತಾ (ಪ್ರಥಮ), ಪಿ.ತನು (ದ್ವೀತಿಯ), ಪ್ರತೀಕ್ಷಾ (ತೃತೀಯ) ಮೊದಲ ಮೂರು ಸ್ಥಾನಗಳನ್ನು ಗೆದ್ದುಕೊಂಡರು.

ಲೆಮೆನ್​ ಆ್ಯಂಡ್​ ಸ್ಪೂನ್​ (30-40 ವರ್ಷ): 1. ಕೆ.ಆರ್​.ಲಕ್ಷ್ಮಮ್ಮ (ಊರ್ಡಿಗೆರೆ), 2. ಟಿ.ವಿ.ಮೇನ (ಕ್ಯಾತಸಂದ್ರ), ಆರ್​.ಚಿನ್ಮಯಿ (ತುಮಕೂರು)

ಬಾಲ್​ ಇನ್​ ದಿ ಬಕೆಟ್​ (50-60 ವರ್ಷ): 1. ಉದಯಲಕ್ಷ್ಮೀ (ಊರ್ಡಿಗೆರೆ), 2. ಪುಟ್ಟತಾಯಮ್ಮ (ಊರ್ಡಿಗೆರೆ), 3. ಸೌಭಾಗ್ಯಮ್ಮ (ರಂಗನಾಯಕನಪಾಳ್ಯ)

ರಂಗೋಲಿ ಸ್ಪರ್ಧೆ (ಮುಕ್ತ) : 1. ಎಸ್​.ಜಿ.ನಿರ್ಮಲ (ತುಮಕೂರು), 2. ಎನ್​.ಕೋಮಲ (ಉಪ್ಪಾರಹಳ್ಳಿ), 3. ಮಹದೇವಮ್ಮ/ನಯನಶ್ರೀ (ಹನುಮಂತಪುರ/ಶಿರಾಗೇಟ್​)

ಬಾಂಬ್​ ಇನ್​ ದ ಸಿಟಿ (ಮುಕ್ತ): 1. ಎಚ್​.ರಮ್ಯ (ಆರ್​ಜಿ ಹಳ್ಳಿ), 2. ಆರ್​.ವನಜಾ (ಕ್ಯಾತಸಂದ್ರ), 3. ವಿ.ಸಂಜನಾ (ತುಮಕೂರು)

ಅಂತ್ಯಾಕ್ಷರಿ: 1. ಸುಮಂಗಲ/ಸಿ.ತಿಮ್ಮಕ್ಕ , 2. ಚಂದ್ರಕಲ/ಶಿಲ್ಪಶ್ರೀ 3. ಶಶಿಕಲಾ/ಜಯಮ್ಮ

ಹಗ್ಗ-ಜಗ್ಗಾಟ: ಓನಕೆ ಓಬವ್ವ ತಂಡ (ಪ್ರಥಮ), ತುಂಗ ತಂಡ (ದ್ವೀತಿಯ)

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯರು ಇದ್ದಾರೆ. ಸಹೋದರಿಯಾಗಿ, ತಾಯಿಯಾಗಿ, ಗೆಳತಿಯಾಗಿ ಪ್ರತಿ ಗಂಡಸಿನ ಯಶಸ್ಸನ್ನು ಬಯಸುವವಳಲು ಹೆಣ್ಣು. ಮಹಿಳೆಯರಿಲ್ಲದ ಪ್ರಪಂಚವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಗರಪಾಲಿಕೆ ಮಾಜಿ ಉಪಮೇಯರ್​ ರೂಪಶ್ರೀ ಹೇಳಿದರು.

ಒಂದು ಹೆಣ್ಣು ಮತ್ತೊಂದು ಜೀವಕ್ಕೆ ಉಸಿರು ನೀಡುತ್ತಾಳೆ. ಹಾಗಾಗಿ, ಹೆಣ್ಣಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಸಾಧನೆಯ ಛಾಪು ಮೂಡಿಸುತಿದ್ದಾಳೆ.ಆಕೆ ಕಾಲಿಡದ ಕ್ಷೇತ್ರವಿಲ್ಲ. ಏಕಾಂಗಿಯಾಗಿ ಯುದ್ದ ವಿಮಾನ ನಡೆಸುವಂತಹ ಅತಿ ಕೌಶಲ್ಯಯುಕ್ತ ಕೆಲಸದಲ್ಲಿಯೂ ಸೈ ಎನಿಸಿಕೊಂಡಿರುವ ಮಹಿಳೆಯನ್ನು ಅಬಲೆ ಎನ್ನುವ ಮಾತು ಒಪ್ಪುವಂತಹದ್ದಲ್ಲ.ಅಂತರರಾಷ್ಟ್ರೀಯ ಮಹಿಳಾ ದಿನವೆಂಬುದು ನಮ್ಮ ಸಾಧನೆಯ ಹಿನ್ನೋಟವನ್ನು ನೆನಪಿಸುವ ಕಾರ್ಯಕ್ರಮವಲ್ಲದೆ, ಮುಂದಿನ ಸಾಧನೆಗೆ ಸ್ಪೂರ್ತಿ ನೀಡುವ ಕಾರ್ಯಕ್ರಮವಾಗಿದೆ. ಇದನ್ನು ಪ್ರತಿಯೊಬ್ಬ ಮಹಿಳೆಯರು ಅರ್ಥ ಮಾಡಿಕೊಂಡು ಮುನ್ನೆಡೆಯಬೇಕೆಂದು ತಿಳಿಸಿದರು.

ಕ್ರೀಡಾಪಟುವಾಗಿ, ಅಧಿಕಾರಿಯಾಗಿ ನನ್ನ ನೆಚ್ಚಿನ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಿದ್ದರೆ, ಅದಕ್ಕೆ ಬೆನ್ನೆಲುಬಾಗಿ ನಿಂತವರು ನನ್ನ ತಾಯಿ ಮತ್ತು ಪತ್ನಿ. ಇತಿಹಾಸವನ್ನು ಗಮನಿಸಿದಾಗ ರಾಷ್ಟ್ರಪಿತ ಮಹಾತ್ಮಗಾಂಧಿ ಹಿಂದೆ ಕಸ್ತೂರಬಾ, ಡಾ.ಬಿ.ಆರ್​.ಅಂಬೇಡ್ಕರ್​ ಹಿಂದೆ ರಮಾಬಾಯಿ ಇರುವಂತೆ, ಹಲವು ಗಣ್ಯರ ಯಶಸ್ಸಿನ ಹಿಂದೆ ಆ ಮನೆಯ ಗೃಹಿಣಿಯರು ಇದ್ದಾರೆ. ಇವರು ನಿಜವಾಗಿಯೂ ಪ್ರಾತ@ಸ್ಮರಣಿಯರು. ಇಂದಿನ ಕ್ರೀಡಾ ಸ್ಪರ್ಧೆಗಳಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸಿ, ನಿಮ್ಮೆಲ್ಲಾ ಒತ್ತಡದ ಬದುಕನ್ನು ಕೆಲ ಗಂಟೆಗಳ ಕಾಲ ಮರೆತು ಸಂತೋಷದಿಂದ ಇರುವಂತೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕ ರೋಹಿತ್​ ಗಂಗಾಧರ್​ ಮನವಿ ಮಾಡಿದರು.

ಸಿಡಿಪಿಒ ಸರೋಜಮ್ಮ, ಬಿಸಿಎಂ ಅಧಿಕಾರಿ ಎಸ್​.ಜಿ.ನಿರ್ಮಲ, ಯುವಸಬಲೀಕರಣ ಇಲಾಖೆಯ ಕಚೇರಿ ಅಧೀಕ್ಷಕಿ ಚಂದ್ರಕಲಾ ಅಂತರರಾಷ್ಟ್ರೀಯ ಮಹಿಳಾ ದಿನದ ಕುರಿತು ಮಾತನಾಡಿದರು.

ಅಂತರರಾಷ್ಟ್ರೀಯ ಕಬ್ಬಡಿ ತರಬೇತುದಾರ ಮಹಮದ್​ ಇಸ್ಮಾಯಿಲ್​, ಮಂಜುನಾಥ್​, ಪ್ರದಿಪಕುಮಾರ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net