ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ದಾಪುಗಾಲು

19 SND 03
ಸಿಂಧನೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಮಂಗಳವಾರ ಉದ್ಘಾಟಿಸಲಾಯಿತು. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ರಮಾದೇವಿ ಶಂಭೋಜಿ, ನಿವೃತ್ತ ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ, ಸಂಘದ ಗೌರವಾಧ್ಯಕ್ಷ ಸರಸಾ, ಪ್ರಧಾನ ಕಾರ್ಯದರ್ಶಿ ವಸುಧಾ, ಕೋಶಾಧ್ಯಕ್ಷೆ ರೇಣುಕಾ, ಸಾವಿತ್ರಿ ದೀಕ್ಷಿತ್, ಶಾಹೀದ್ ಇತರರಿದ್ದರು.
Published on

ಸಿಂಧನೂರು:ಮಹಿಳೆಯರು ಸಂಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಬೇಕು ಎಂದು ಅಕ್ಷರ ದಾಸೋಹ ತಾಲೂಕು ಅಧಿಕಾರಿ ಸಾಬಣ್ಣ ವಗ್ಗರ್ ಹೇಳಿದರು.

ನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲು ಇಟ್ಟಿದ್ದಾಳೆ. ಐಟಿ-ಬಿಟಿ ಕ್ಷೇತ್ರದಲ್ಲಿ ತನ್ನ ಸಾಧನೆಯ ಛಾಪು ಮೂಡಿಸಿದ್ದಾಳೆ. ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು ಎಂದರು.

ನಿವೃತ್ತ ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ ಮಾತನಾಡಿ, ಮಹಿಳೆ ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ ಹೀಗೆ ಎಲ್ಲ ಪಾತ್ರಗಳನ್ನು ಸೌಮ್ಯದಿಂದಲೇ ನಿರ್ವಹಿಸುತ್ತಾಳೆ. ಹಲವಾರು ಸಮಸ್ಯೆಗಳ ಮಧ್ಯದಲ್ಲಿಯೂ ಪ್ರತಿಯೊಂದು ಮನೆಯಲ್ಲಿ ಸಂಸ್ಕಾರ ನೀಡಿ, ಮನೆ ಬೆಳಗುತ್ತಾಳೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ರಮಾದೇವಿ ಶಂಭೋಜಿ ಮಾತನಾಡಿದರು.

ಉಪನ್ಯಾಸಕರ ಸಂಘದ ಅಧ್ಯಕ್ಷ ಶೇಖರಯ್ಯಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಮಾನಮ್ಮ, ಪ್ರೌಢಶಾಲಾ ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಿರುಪತಿ ನಾಯಕ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಅಡಿವೆಮ್ಮ, ಜ್ಯೋತಿ, ಸುಬ್ಬಲಕ್ಷ್ಮೀ, ಸುಲೋಚನಾ, ಸಿಸ್ಟರ್ ಮೇರಿ, ಗೌರವ ಸಲಹೆಗಾರರಾದ ಸುಮಿತ್ರಾ ಹಿರೇಮಠ, ಗೌರವಾಧ್ಯಕ್ಷ ಸರಸಾ, ಪ್ರಧಾನ ಕಾರ್ಯದರ್ಶಿ ವಸುಧಾ, ಕೋಶಾಧ್ಯಕ್ಷೆ ರೇಣುಕಾ, ಸಾವಿತ್ರಿ ದೀಕ್ಷಿತ್, ಶಾಹೀದ್, ರೇಶ್ಮಾ ಕಂದಕೂರು, ನೀಲವ್ವ, ಸಿದ್ದೇಶ್ವರಿ, ಕವಿತಾ, ಜ್ಯೋತಿಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net