ಮಹಿಳಾ ಮಂಡಳಗಳಿಗೆ ಸಮೂಹ ವಚನ ಗಾಯನ ಸ್ಪರ್ಧೆ

images
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

`ಸಾಂಸ್ಕೃತಿಕ ನಾಯಕ ಬಸವಣ್ಣ` ಕಾರ್ಯಕ್ರಮದ ಅಂಗವಾಗಿ ಬಹಿಷ್ಕೃತ ಹಿತಕಾರಿಣಿ ಸಭಾ, ಅನುರಾಗ ಸಾಂಸ್ಕೃತಿಕ ಬಳಗ, ರೈಸಿಂಗ್ ಸ್ಟಾರ್ಸ್ ಕಲ್ಚರಲ್ ನೃತ್ಯ ಅಕಾಡೆಮಿ ಮತ್ತು ಗಣಕರಂಗ ಆಶ್ರಯದಲ್ಲಿ ಡಿ. 7ರಂದು ಮಧ್ಯಾಹ್ನ 2 ಗಂಟೆಗೆ ಜಿಲ್ಲೆಯ ಮಹಿಳಾ ಮಂಡಳ ಹಾಗೂ ಮಹಿಳಾ ಭಜನಾ ಮಂಡಳಿಗಳಿಗಾಗಿ `ಬಸವಣ್ಣನವರ ಸಮೂಹ ವಚನ ಗಾಯನ' ಸ್ಪರ್ಧೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ. ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಏರ್ಪಡಿಸಿದೆ. ಕನಿಷ್ಠ 5 ಮಹಿಳೆಯರು ಭಾಗವಹಿಸಬಹುದು. 5 ನಿಮಿಷ ಕಾಲಾವಕಾಶ ಇರುತ್ತದೆ. ವಾದ್ಯಗಳ ಸಂಗಡ ಹಾಡು ಪ್ರಸ್ತುತಪಡಿಸಬಹುದು. ವಿಜೇತರಿಗೆ ಅದೇ ದಿನ ಸಂಜೆ ಬಹುಮಾನ ನೀಡಲಾಗುವುದು. ಆಸಕ್ತರು ಡಿ. 5ರೊಳಗೆ ಹೆಸರು ನೋಂದಾಯಿಸಬೇಕು. ಮಾಹಿತಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net