

ಚಿಕ್ಕಮಗಳೂರು: ಮಹಿಳೆಗೆ ಮನೆಯಲ್ಲಿ ಆರ್ಥಿಕ ಸ್ವಾತಂತ್ರÈ ಲಭ್ಯವಾದರೆ ಖರ್ಚುವೆಚ್ಚಗಳನ್ನು ತೂಗಿಸಿ ಒಂದಷ್ಟು ಉಳಿತಾಯ ಮಾಡುತ್ತಾಳೆ. ಉಳಿತಾಯ ಪ್ರವೃತ್ತಿಯಿಂದಾಗಿ ಕಷ್ಟಕಾಲದಲ್ಲಿ ಕುಟುಂಬಕ್ಕೆ ಸಹಾಯವಾಗುತ್ತದೆ. ಈ ಉಳಿತಾಯ ರಾಷ್ಟçದ ಅಭಿವೃದ್ಧಿಗೂ ಅನುಕೂಲಕರ ಎಂದು ಅಂಚೆ ಇಲಾಖೆ ಸಹಾಯಕಿ ಸಿ.ಎಂ.ಗೌತಮಿ ಬಸವಪ್ರಭು ಅಭಿಪ್ರಾಯಪಟ್ಟರು.
ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘದ ಜಯನಗರ ಬಡಾವಣೆಯ ಶರಣೆ ಸತ್ಯಕ್ಕ ಗುಂಪಿನಿAದ ಆಯೋಜಿಸಲಾಗಿದ್ದ ಕಾರಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಮೊದಲ ಕವಿಯತ್ರಿ ಅಕ್ಕಮಹಾದೇವಿಯ ಅನೇಕ ವಚನಗಳು ಪ್ರಸ್ತುತತೆ ಹೊಂದಿವೆ. ನಾಳೆ ಬರುವುದು ನಮಗಿಂದೆ ಬರಲಿ ಎಂಬ ವಚನವನ್ನು ವ್ಯಾಖ್ಯಾನಿಸಿದ ಅವರು ನಾಳೆ ಎಂದು ಮುಂದೂಡದೆ ಇಂದೇ ಉಳಿತಾಯ ಪ್ರವೃತ್ತಿಯನ್ನು ಮಹಿಳೆಯರು ಅನುಸರಿಸಬೇಕು ಎಂದು ಕರೆ ನೀಡಿದರು.
ಅಂಚೆ ಇಲಾಖೆ ಪುರಾತನ ಇಲಾಖೆಯಾಗಿದÀÄ್ದ, ಇದಕ್ಕೆ ಭಾರತದಲ್ಲಿ ೧೫೦ವರ್ಷಗಳ ಇತಿಹಾಸವಿದೆ. ಕೇಂದ್ರದಲ್ಲಿ ೧.೫೫ ಲಕ್ಷ ಅಂಚೆ ಕಚೇರಿಗಳಿದ್ದು, ನಂಬಿಕೆಗೆ ಅರ್ಹವಾಗಿವೆ. ದೇಶದ ಯಾವುದೇ ಮೂಲೆ-ಗುಡ್ಡಗಾಡು ಪ್ರದೇಶದಲ್ಲಾದರೂ ಒಂದು ಅಂಚೆ ಕಛೇರಿ ಇರುತ್ತದೆ. ಒಟ್ಟಾರೆ ೪ಲಕ್ಷ ಸಿಬ್ಬಂದಿಯ ದೊಡ್ಡ ಪರಿವಾರವೇ ಇಲಾಖೆಯಲ್ಲಿದೆ. ಹೊರನೋಟಕ್ಕೆ ಅಂಚೆ ವಿತರಿಸುವ ಪೋಸ್ಟ್ಮೆನ್ ಮಾತ್ರ ಕಾಣುತ್ತಾನೆ. ಬದಲಾದ ಕಾಲಘಟ್ಟದಲ್ಲಿ ಬ್ಯಾಂಕಿAಗ್ ಮತ್ತು ವಿಮೆ ಕ್ಷೇತ್ರಗಳಲ್ಲೂ ಅಂಚೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಅಂಖೆ ಇಲಾಖೆಯಲ್ಲಿ ೧೩ ವಿಧದ ವಿವಿಧ ಯೋಜನೆಗಳಿವೆ. ಎಸ್‌ಬಿ, ಆರ್‌ಡಿ, ಎಂಐಎಸ್, ಮಹಿಳಾ ಸಮ್ಮಾನ್ ಮತ್ತಿತರ ಆಕರ್ಷಕ ಯೋಜನೆಗಳಿವೆ. ೨೦೧೪ರಲ್ಲಿ ಕೇಂದ್ರಸರ್ಕಾರ ಜಾರಿ ಮಾಡಿದಂಥ ಸುಕನ್ಯಾ ಸಮೃದ್ಧಿ ಒಂದು ಅದ್ಭುತ ಯೋಜನೆ. ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಮದುವೆಗೆ ಸಹಕಾರಿಯಾಗಲಿದೆ. ಮಹಿಳೆಯರಿಗಷ್ಟೇ ಅಲ್ಲ ಪುರುಷರಿಗೂ ಪಿಪಿಎಫ್ ಸೇರಿದಂತೆ ಅನೇಕ ಉಳಿತಾಯ ಸ್ಕೀಮ್‌ಗಳಿವೆ. ಹಿರಿಯ ನಾಗರಿಕರ ಹೂಡಿಕೆಗೆ ಶೇ.೮.೨ರಷ್ಟು ಬಡ್ಡಿ ನೀಡಲಾಗುತ್ತಿದೆ. ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ, ವಿಧವಾ ವೇತನ ಹೀಗೆ ಅನೇಕ ಪಲಾನುಭವಿಗಳಿಗೆ ಅಂಚೆ ಇಲಾಖೆ ಸಹಾಯವಾಗಿದೆ ಎಂದÀÄ ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾಸಿ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಂಡದ ಮುಖಂಡೆ ಹೇಮಲತಾ ಚಂದ್ರಶೇಖರ್, ಸದಸ್ಯರಾದ ಮೋಹನಾ ಮಾದೇಶ್, ಕಮಲಾ ರಾಜಶೇಖರ್, ಶಿಕ್ಷಕಿ ನಳಿನಾ ನಿರಂಜನ್ ಮತ್ತಿತರರಿದ್ದರು.