

ಮಂಡ್ಯ: ಗ್ರಾಮೀಣ ಭಾಗದ ಮಹಿಳೆಯರನ್ನು ಓದೋ ಚರ್ಚೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ತಾಲೂಕಿನ ಉಮ್ಮಡಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಆಯೋಜಿಸಿರುವ ವಿಭಿನ್ನ ಕಾರ್ಯಕ್ರಮ ಗಮನಸೆಳೆಯುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶದಂತೆ ‘ನಾವು ಮತ್ತು ನಮ್ಮ ಸಮಯ’ ಶೀರ್ಷಿಕೆಯಡಿ ಗ್ರಾಪಂ ಅರಿವು ಕೇಂದ್ರದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ಸಮಯ ಮೀಸಲು, ಮಹಿಳೆಯರು ಅರಿವು ಕೇಂದ್ರಕ್ಕೆ ತೆರಳಿ ಓದು, ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಉಮ್ಮಡಹಳ್ಳಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ.
ಇನ್ನು ಮಹಿಳೆಯರು ಕೇಂದ್ರಕ್ಕೆ ಬರಲು ಅನುಕೂಲವಾಗುವಂತೆ ರಜಾದಿನವನ್ನು ಹೊರತುಪಡಿಸಿ ಮಧ್ಯಾಹ್ನ 3.30ರಿಂದ 4.30ರವರೆಗೆ ಸಮಯ ನಿಗದಿ ಮಾಡಲಾಗಿದೆ. ಈ ಅವಧಿಯಲ್ಲಿ ಪತ್ರಿಕೆ, ಪುಸ್ತಕಗಳನ್ನು ಓದುವುದು, ಇದಲ್ಲದೆ ಪೌಷ್ಟಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು. ಇದರ ಜತೆಗೆ ಚಿತ್ರಕಲೆ, ಪ್ರಬಂಧ ಬರೆಯಲು, ರಂಗೋಲಿ ಹಾಕುವುದು, ಹಾಡು ಹೇಳುವುದು, ಕಂಪ್ಯೂಟರ್ ಜತೆಗೆ ಚೆಸ್, ಕೇರಂ, ಹಾವು-ಏಣಿ, ಲೂಡೋ, ಅಳುಗುಳಿ ಮನೆ ಆಟವಾಡಬಹುದು. ಇದಲ್ಲದೆ ಸ್ಮಾರ್ಟ್‌ಫೋನ್ ಬಳಕೆ, ಓಟಿಪಿ ಹೇಳಿದರೆ ಎದುರಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಗ್ರಂಥಾಲಯದಲ್ಲಿ ಹಲವು ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 30ಕ್ಕೂ ಹೆಚ್ಚು ಮಹಿಳೆಯರು ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗ್ರಂಥಾಲಯದಲ್ಲಿರುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ ಮಹಿಳೆಯರು ಸದಸ್ಯತ್ವ ಪಡೆಯುವಂತೆ ಮಾಡುವುದರ ಜತೆಗೆ ಓದುವಂತೆ ಪ್ರೋತ್ಸಾಹಿಸಲಾಗುತ್ತಿದೆ.ಯೋಗೇಶ್ಗ್ರಂಥಪಾಲಕಉಮ್ಮಡಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ