ಕುಡಿಯುವ ನೀರಿಗಾಗಿ ಮಹಿಳೆಯರ ಪ್ರತಿಭಟನೆ

16yaragatti1
filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 5794; AI_Scene: (200, 2); aec_lux: 135.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 46;
Published on

ಯರಗಟ್ಟಿ: ಅಸಮರ್ಪಕ ಕುಡಿಯುವ ನೀರು ಸರಬರಾಜು ಖಂಡಿಸಿ ಸ್ಥಳಿಯ ಅಂಬೇಡ್ಕರ್​ ನಗರದ ನಿವಾಸಿಗಳು ಪಟ್ಟಣದಲ್ಲಿ ಬುಧವಾರ ಖಾಲಿ ಕೊಡ ಹಿಡಿದು ಪ್ರತಿಭಟಿಸಿದರು. |ಅಂಬೇಡ್ಕರ್​ ನಗರದ ಮನೆಗಳಿಗೆ ನಲ್ಲಿಗಳೇ ಇಲ್ಲ. ವಾರಕೊಮ್ಮೆ ಸಾರ್ವಜನಿಕ ತೊಟ್ಟಿಯಲ್ಲಿ ನೀರು ತುಂಬಿಕೊಳ್ಳಬೇಕು. ತೊಟ್ಟಿಯು ತ್ಯಾಜ್ಯ ತುಂಬಿದ್ದು, ಅದೇ ನೀರನ್ನು ಬಳಸುವ ಅನಿವಾರ್ಯತೆ ಇದೆ ಎಂದು ಮಹಿಳೆಯರು ದೂರಿದರು.

ತೊಟ್ಟಿ ಶುಚಿಗೊಳಿಸಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಪಟ್ಟಣ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪಟ್ಟಣ ಪಂಚಾಯಿತಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಸ್ತೂರಿ ತಳವಾರ, ದುರ್ಗವ್ವ ಕಮತಗಿ, ಭಾರತಿ ಚನ್ನಮೇತ್ರಿ, ಶೋಭಾ ಗಿರೆವ್ವಗೋಳ, ಲವ್ವ ಉದ್ದಪ್ಪನವರ, ಮಹಾದೇವಿ ಗಿರೆವ್ವಗೋಳ, ಜಯಶ್ರೀ ಮಾಳಗಿ, ಸಾವಿತ್ರಿ ಹಿರೇಮೆತ್ರಿ, ಲ$್ಮವ್ವ ಮಾಳಗಿ, ರತ್ನವ್ವ ಚನ್ನಮೇತ್ರಿ, ದುರ್ಗಪ್ಪ ಹಿರೇಮೆತ್ರಿ, ಸುನೀಲ ಚನ್ನಮೇತ್ರಿ, ಸಚಿನ್​ ಚನ್ನಮೇತ್ರಿ, ಮೋಜಸ್​ ಚನ್ನಮೇತ್ರಿ, ರವಿ ಭಜಂತ್ರಿ, ಮಾರುತಿ ಉದ್ದಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net