ಬಾರ್ ಆರಂಭ ವಿರೋಧಿಸಿ ಮಹಿಳೆಯರ ಪ್ರತಿಭಟನೆ

7 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಹೆಗ್ಗೇರಿ ಗ್ರಾಮದಲ್ಲಿ ಬಾರ್ ಆರಂಭಿಸುತ್ತಿರುವುದನ್ನು ವಿರೋಽಸಿ ಗ್ರಾಮದ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಲೋಟಸ್ ಲಿಕ್ಕರ್ಸ್ ಹೆಸರಿನಲ್ಲಿ ಬಾರ್ ಆರಂಭವಾಗುತ್ತಿದೆ. ಈ ಸಂಬ0ಧ ಭಾನುವಾರ ಪೂಜೆ ನಡೆಸಲಾಗಿತ್ತು. ಸ್ಥಳೀಯ ಮಹಿಳೆಯರು ಸ್ಥಳಕ್ಕೆ ತೆರಳಿ ವಿರೋಧ ವ್ಯಕ್ತಪಡಿಸಿದ್ದರು. ಬಾರ್ ಮಾಲೀಕ ನಾರಾಯಣ ಕಲಾಲ ಎಂಬುವರು ಸರ್ಕಾರದ ಪರವಾನಗಿ ಇದ್ದು, ಬಾರ್ ಆರಂಭಿಸುತ್ತಿರುವುದಾಗಿ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರವೂ ಸ್ಥಳಕ್ಕೆ ತೆರಳಿದ ಮಹಿಳೆಯರು ಪ್ರತಿಭಟನೆ ಮುಂದುವರಿಸಿದರು. ಜನಸಂಖ್ಯೆ ಕಡಿಮೆ ಇರುವ ಪ್ರದೇಶದಲ್ಲಿ ಬಾರ್ ಆರಂಭ ಮಾಡಬಾರದು. ಇದರಿಂದ ಗ್ರಾಮದ ಜನರು ದುಶ್ಚಟಕ್ಕೆ ಬಲಿಯಾಗುತ್ತಾರೆ. ಬಡ ಕುಟುಂಬಗಳು ಬೀದಿಗೆ ಬೀಳುತ್ತವೆ. ಯಾವುದೇ ಕಾರಣಕ್ಕೂ ಬಾರ್ ಆರಂಭಿಸಲು ಬಿಡುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದರು.
ಗರಗ ಠಾಣೆ ಪಿಎಸ್‌ಐ ಎ.ಎಂ. ಮಂಟೂರ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net