ಮಹಿಳಾ ಶಕ್ತಿ ಸದ್ಬಳಕೆಯಾಗಲಿ

28KUDACHI1
Published on

ಕುಡಚಿ: ಅಧ್ಯಾತ್ಮದ ಶಕ್ತಿಯಿಂದ ಮನಸ್ಸು ಗಟ್ಟಿಯಾಗಿಸಿಕೊಳ್ಳಲು ಸಾಧ್ಯ ಎಂದು ತುಂಗಳ ಸಿದ್ದಲಿಂಗ ಶಾಂಭವಿ ಆಶ್ರಮದ ಮಾತೋಶ್ರೀ ಅನುಸೂಯಾದೇವಿ ಹೇಳಿದರು.

ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಾಶಿವರಾತ್ರಿ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಶಿವನ ಡಂಗೂರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ನೀಡುತ್ತಿರುವ ಜ್ಞಾನ ಬಳಸಿಕೊಂಡು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರಬೇಕು. ಜಗತ್ತಿನಲ್ಲಿ ಎಲ್ಲ ಶಕ್ತಿಗಳಿಗಿಂತಲೂ ಸೀ ಶಕ್ತಿ ಬಹಳ ದೊಡ್ಡದು ಎಂದರು.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗಣ್ಯರನ್ನು ಸತ್ಕರಿಸಲಾಯಿತು. ಕುಡಚಿ ಸೇವಾ ಕೇಂದ್ರದ ಬಿಕೆ ವಿದ್ಯಾ ಅಕ್ಕ ಅಧ್ಯಕ್ಷತೆ ವಹಿಸಿದ್ದರು. ಬಿಕೆ ಸವಿತಾ ಅಕ್ಕ, ರೇಣುಕಾ ಅಕ್ಕ, ದೀಪಾಂಜಲಿ ಘಾಟೆ, ಶೋಭಾ ಸನದಿ, ದೀಪಾ ಹುನಚಿಮಾರೆ, ಕಾಂಚನಾ ಕದ್ದು, ಕಮಲಾ ದರೂರೆ, ಸುಜಾತಾ ಪಾಟೀಲ, ಪ್ರತಿಭಾ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net