ಸಮಾಜ ಚಲನಶೀಲವಾಗಲು ಮಹಿಳಾ ಶಕ್ತಿ ಕಾರಣ

10 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಿಳೆ ಅಬಲೆ ಅಲ್ಲ ಅಬಲೆ. ಮಹಿಳಾ ಶಕ್ತಿ ಪುರುಷ ಶಕ್ತಿಗಿಂತ ಮಿಗಿಲಾದದ್ದು. ಸಮಾಜ ಚಲನಶೀಲವಾಗಲು ಮಹಿಳಾ ಶಕ್ತಿಯೇ ಕಾರಣ ಎಂದು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಉಪನಿರ್ದೇಶಕಿ ಜಯಶ್ರೀ ಕಾರೇಕರ ಹೇಳಿದರು.

ಮಹಿಳಾ ದಿನಾಚರಣೆ ನಿಮಿತ್ತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ವತಿಯಿಂದ ಇಲ್ಲಿನ ನೌಕರರ ಭವನದಲ್ಲಿ ಏರ್ಪಡಿಸಿದ್ದ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಖಿಲ ಭಾರತ ಶಿಕ್ಷಕರ ಫೆಡರೇಶನ್​ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಪುರುಷ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಲು ಮಹಿಳಾ ಶಕ್ತಿಯೇ ಕಾರಣ. ಪುರುಷ, ಮಹಿಳೆ ಎಂಬ ಭೇದ ಭಾವವಿಲ್ಲದೆ ಮುನ್ನಡೆದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಮಹಿಳೆ ಕುಟುಂಬ ನಿರ್ವಹಣೆ ಜತೆಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾಳೆ. ಇದಕ್ಕೆ ಅವಳಲ್ಲಿನ ತಾಳ್ಮೆ, ಸಹನೆಯೇ ಕಾರಣ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂದಗಿ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ಅಡಿವೇರ, ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ವಿ.ಎಫ್​ ಚುಳಕಿ ಮಾತನಾಡಿದರು. 300ಕ್ಕೂ ಹೆಚ್ಚು ಮಹಿಳಾ ಶಿಕ್ಷಕಿಯರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸಲಾಯಿತು.

ಶಹರ ಘಟಕದ ಅಧ್ಯಕ್ಷೆ ಶಾಂತಾ ಶೀಲವಂತ ಅಧ್ಯಕ್ಷತೆ ವಹಿಸಿದ್ದರು. ವೈ.ಎಚ್​. ಬಣವಿ, ರಾಜಶೇಖರ ಹೊನ್ನಪ್ಪನವರ, ಅಕ್ಬರಅಲಿ ಸೋಲಾಪೂರ, ಎನ್​.ಸಿ. ಪಾಟೀಲ, ಅಶೋಕ ಎನ್​. ವೈ., ವೀಣಾ ಹೊಸಮನಿ, ಬಿ.ಐ. ಮನಗುಂಡಿ, ಎನ್​.ಆರ್​. ಪಟೇಲ, ಶೋಭಾ ಬಿಂಗೇರಿ, ಡಿ.ವಿ ಸಜ್ಜನ, ಬಿ.ಡಿ. ಪಾಸನ್ನವರ, ಪಿ.ಎಫ್​ ಗುಡೇನಕಟ್ಟಿ, ಉಮೇಶ ಕುರುಬರ, ಮಂಜುನಾಥ ದೊಡಮನಿ, ಇತರರು ಇದ್ದರು.

ಆರ್​.ಬಿ. ಲಿಂಗದಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಆರ್​. ಕಬ್ಬೇರ ನಿರೂಪಿಸಿದರು. ಎಂ.ಸಿ. ಎಲಿಗಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net