ಮುತ್ತೈದೆಯರಿಂದ ಕುಂಭ-ಕಳಸ ಮೆರವಣಿಗೆ

lng Stringers
ಲಿಂಗಸುಗೂರಿನಲ್ಲಿ ರೇಣುಕಾದೇವಿ ಜಾತ್ರೆ ಪ್ರಯುಕ್ತ ಸುಮಂಗಲೆಯರಿಂದ ಕುಂಭ-ಕಳಸ ಮೆರವಣಿಗೆ ನಡೆಯಿತು.
Published on

ಲಿಂಗಸುಗೂರು: ಪಟ್ಟಣದ ರೇಣುಕಾ ನಗರದ ರೇಣುಕಾ ಯಲ್ಲಮದೇವಿ ಜಾತ್ರೆ ಅಂಗವಾಗಿ ಬುಧವಾರ ಬನ್ನಿ ಮಂಟಪದಿಂದ ರೇಣುಕಾದೇವಿ ದೇವಸ್ಥಾನದವರೆಗೆ ಸುಮಂಗಲೆಯರಿಂದ ಕುಂಭ-ಕಳಸ, ಬಾಜಾ-ಭಜಂತ್ರಿಯೊಂದಿಗೆ ದೇವಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ಮಂಗಳವಾರ ರಾತ್ರಿ ಮಹಾಗಣಪತಿ ಹಾಗೂ ನಾಗದೇವತೆಗೆ ರುದ್ರಾಭಿಷೇಕ, ಡೊಳ್ಳು ಮತ್ತು ಜೋಗತಿಯರಿಂದ ಗೀತ ಗಾಯನ ಕಾರ್ಯಕ್ರಮಗಳು ಜರುಗಿದವು.

ಬುಧವಾರ ಬೆಳಗ್ಗೆ ದೇವಿಗೆ ರುದ್ರಾಭಿಷೇಕ, ಷಟ್‌ಸ್ಥಲ ಧ್ವಜಾರೋಹಣ, ಗಂಗಾಸ್ನಾನ, ಕಲಶಾರೋಹಣ, ಕುಂಭಾಭಿಷೇಕ, ಮುತ್ತೈದೆಯರಿಗೆ ಉಡಿ ತುಂಬುವುದು, ಮಹಾಮಂಗಳಾರತಿ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.

ಹುನಕುಂಟಿ ಶರಣಯ್ಯ ತಾತ, ಶಂಭುಲಿಂಗಯ್ಯ ಕಳಸದಗುಡಿ, ಪ್ರಮುಖರಾದ ಪಂಚಾಕ್ಷರಯ್ಯ ಹಿರೇಮಠ, ಬಸವರಾಜಗೌಡ ಗಣೇಕಲ್, ಶಿವಯೋಗಿ, ನಾಗಪ್ಪ ಬೋರಾವತ, ಬಸವರಾಜ ಮರೋಳ, ಮಹೇಶ ಕುಲಕರ್ಣಿ, ನಾಗರಾಜ ತಿಪ್ಪಣ್ಣ, ರಾಘು ಗುತ್ತೇದಾರ, ಚಂದ್ರಕಾಂತ್, ಮುರಳೀಧರ, ಸುರೇಖಾ ಗಣೇಕಲ್, ತೇಜಶ್ವಿನಿ ಬಾಳೇಗೌಡ, ವೀಣಾ ಮೇದಿನಾಪುರ, ಭಾರತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net