ಆರೋಗ್ಯ ಪಾಲನೆಗೆ ಸ್ತ್ರೀಯರು ಗಮನ ಹರಿಸಲಿ

15blrp1
Published on

ಬೇಲೂರು : ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿದ್ದು, ಆರೋಗ್ಯ ಪಾಲನೆಯತ್ತಲೂ ಅವರು ಗಮನ ಹರಿಸಬೇಕು ಎಂದು ಹಾಸನದ ಧರ್ಮಸ್ಥಳ ಆಯುರ್ವೇದಿಕ್ ಆಸ್ಪತ್ರೆ ಚರ್ಮ ಮತ್ತು ಮಧುಮೇಹ ತಜ್ಞೆ ಡಾ.ಶೋಭಾ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಒಕ್ಕಲಿಗರ ಮಹಿಳಾ ಸಂಘದಿಂದ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಗಟ್ಟಿಯಾಗಿ ನಿಂತರೆ ಕಾಯಿಲೆ ತನ್ನಿಂತಾನೆ ದೂರವಾಗುತ್ತದೆ. ಏನನ್ನಾದರೂ ಸಾಧಿಸಲು ಪೂರಕವಾಗುತ್ತದೆ ಎಂದರು.
ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷೆ ಭಾರತೀಗೌಡ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ನಾವು ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವ ಕೆಲಸ ಮಾಡಿದರೆ ಅವರು ಏನನ್ನಾದರೂ ಸಾಧಿಸಲು ಸಾಧ್ಯವಾಗಲಿದೆ ಎಂದರು.ಟಿ.ನರಸೀಪುರ ಚುಂಚಶ್ರೀ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಉಷಾ, ತಾಲೂಕು ಮಹಿಳಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷೆ ಶ್ರೀದೇವಿ, ಉಪಾಧ್ಯಕ್ಷೆ ಮುದ್ದಮ್ಮ, ಕಾರ್ಯದರ್ಶಿ ಕವಿತಾ, ಖಜಾಂಚಿ ಉಷಾದೇವಿ, ನಿರ್ದೇಶಕರಾದ ಪದ್ಮಾಕ್ಷಿ ಇತರರಿದ್ದರು.
ಶತಾಯುಷಿಗಳಾದ ನಂಜಮ್ಮ, ಹೊನ್ನಮ್ಮ ಹಾಗೂ ಕ್ರೀಡಾಪಟು ಜ್ಞಾನೇಶ್ವರಿ, ಪದವಿ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆದ ಸಂಯಮ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net