ಕಡಬ: ಮಹಿಳೆಯರು ಮುಖ್ಯವಾಹಿನಿಯಲ್ಲಿ ತೊಡಗಿಸಿ ಅವರಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಇಂತಹ ಸಭೆಗಳು ಸಹಕಾರಿ. ಮಹಿಳೆಯರು ಕೌಟುಂಬಿಕ, ಪೌಷ್ಠಿಕತೆ, ಆರ್ಥಿಕ ಸಬಲೀಕರಣ ಬಗ್ಗೆ ಚರ್ಚೆ ನಡೆಸಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದು ಎಂದು ಗ್ರಾ.ಪಂ.ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಹೇಳಿದರು.
ಬೆಳಂದೂರು ಗ್ರಾಮಪಂಚಾಯಿತಿಯ ಮಹಿಳಾ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾ.ಪಂ.ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರಾದ ಗೀತಾ ಕುವೆತ್ತೋಡಿ, ತಾರಾ ಅನ್ಯಾಡಿ, ಲೋಹಿತಾಕ್ಷ ಕೆಡೆಂಜಿಕಟ್ಟ, ವಿಠಲ ಗೌಡ ಅಗಳಿ, ಉಮೇಶ್ವರಿ ಅಗಳಿ, ಪಾರ್ವತಿ ಮರಕ್ಕಡ, ಕುಸುಮಾ ಅಂಕಜಾಲು, ಪ್ರವೀಣ್ ಕೆರೆನಾರು, ಗೌರಿ ಮಾದೋಡಿ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ ಕೆ.ಸ್ವಾಗತಿಸಿದರು. ಲೆಕ್ಕ ಸಹಾಯಕಿ ಸುನಂದಾ ವಂದಿಸಿದರು.