ಅಯೋಧ್ಯೆಯಲ್ಲಿ ಹೊಸನಗರದ ಮಹಿಳಾ ಡೊಳ್ಳು ತಂಡದ ಕಂಪು

22hos1p lakno
ಹೊಸನಗರದ ಮಹಿಳಾ ಡೊಳ್ಳು ಕುಣಿತ ತಂಡಕ್ಕೆ ಬೀಳ್ಕೊಡುಗೆ ನೀಡಲಾಯಿತು. ಎಚ್.ಆರ್.ಶಶಿಧರ ನಾಯಕ್, ಪಿ.ಆರ್.ಸಂಜೀವ, ಮಹಾಬಲ, ಕೆ.ಜಿ.ನಾಗೇಶ್, ಪಿ.ಮನೋಹರ ಇತರರಿದ್ದರು.
Published on

ಹೊಸನಗರ: ಲಕ್ನೋದಲ್ಲಿ ಫೆ.25ರಂದು ಹಾಗೂ ಅಯೋಧ್ಯೆಯಲ್ಲಿ ಫೆ.26ರಂದು ಆಯೋಜಿಸಿರುವ 18ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಹೊಸನಗರದ ರಾಮ ಕ್ಷತ್ರಿಯ ಮಹಿಳಾ ಕಲಾ ತಂಡ ಡೊಳ್ಳು ಪ್ರದರ್ಶನ ನೀಡಲಿದೆ.

ಡೊಳ್ಳು ಕುಣಿತ ಕಲಾತಂಡದ ಸದಸ್ಯರಾದ ಎಸ್.ಪಿ ಪ್ರತಿಭಾ, ಜಿ.ಅನುಪಮಾ, ಎಚ್.ಪಿ ಪವಿತ್ರಾ, ಎನ್.ಅರ್ಚನಾ, ಕೆ.ಶ್ವೇತಾ, ನಮಿತಾ, ಎಸ್.ಸುಕನ್ಯಾ, ಶಾಲಿನಿ, ರತ್ನಾ, ಎನ್.ಸ್ವಾತಿ, ಅನಿಲ್, ಮಂಜುನಾಥ ಕಲಾತಂಡದಲ್ಲಿ ಭಾಗವಹಿಸುವರು. ತಂಡವನ್ನು ಹೊಸನಗರದ ಕೋಟೆಗಾರ್ ವಿದ್ಯಾವರ್ಧಕ ಸಂಘ, ಕೋಟೆಗಾರ ಯುವಕ ಸಂಘ ಹಾಗೂ ಕೋಟೆಗಾರ ಮಹಿಳಾ ಮಂಡಳಿಯ ಸದಸ್ಯರು ಬುಧವಾರ ಬೀಳ್ಕೊಟ್ಟರು.
ಕೋಟೆಗಾರ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಬಿ.ಗೋವಿಂದಪ್ಪ, ವಿಶ್ವರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಎಚ್.ಆರ್.ಶಶಿಧರ ನಾಯಕ್, ನಿರ್ದೇಶಕರಾದ ಪಿ.ಆರ್.ಸಂಜೀವ, ಮಹಾಬಲ, ಕೆ.ಜಿ.ನಾಗೇಶ್, ಪಿ.ಮನೋಹರ, ಎಚ್.ಮಂಜುನಾಥ, ಭಾಗೀರಥಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net