ಮಹಿಳಾ ದಿನಾಚರಣೆ ನಾಳೆ

6 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಿಳಾ ದಿನ ನಿಮಿತ್ತ ಐಎಂಎ ಮಹಿಳಾ ವೈದ್ಯರ ವಿಭಾಗ ವತಿಯಿಂದ ಮಾ. 8ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಡಾ. ಪಲ್ಲವಿ ದೇಶಪಾಂಡೆ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 8ರಂದು ಬೆಳಗ್ಗೆ 7 ಗಂಟೆಗೆ ಕೆಸಿಡಿ ಮೈದಾನದಲ್ಲಿ ವಿವಿಧ ಮಹಿಳಾ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿನಿಯರಿಗೆ ಥೀಮ್​ ಆಧಾರಿತ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಬಳಿಕ 7.45ಕ್ಕೆ ಕೆಸಿಡಿ ಮೈದಾನದಿಂದ ಜುಬಿಲಿ ವೃತ್ತವರೆಗೆ ಜಾಥಾ ನಡೆಯಲಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಜಾಥಾಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ಅನುರಾಧಾ ವಸ್ತ್ರದ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಆರ್​ಸಿಎಚ್​ಒ ಡಾ. ಸುಜಾತಾ ಹಸವಿಮಠ ಆಗಮಿಸಲಿದ್ದಾರೆ. ಜಾಥಾದಲ್ಲಿ ಡೊಳ್ಳು ಕುಣಿತ ತಂಡಗಳು ಭಾಗವಹಿಸಲಿವೆ ಎಂದರು.

ಎಚ್​ಪಿವಿ ಲಸಿಕೆ, ಮಾನಸಿಕ ಆರೋಗ್ಯ, ರಸ್ತೆ ಸುರಕ್ಷತೆ ಸೇರಿ ಮಹಿಳೆಯರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಉತ್ತಮ ಪ್ರದರ್ಶನ ತೋರಿದವರಿಗೆ ಬಹುಮಾನಗಳನ್ನು ಸಹ ನೀಡಲಾಗುವುದು ಎಂದರು.

ಡಾ. ನವೀನ ಮಂಕಣಿ, ಡಾ. ವಾಣಿ ಇರಕಲ್​, ಡಾ. ಸುಹಾಸ ಹಂಚಿನಮನಿ, ಡಾ. ಮಾಧುರಿ ಕಬಾಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net