ಸಾಧಕ ಮಹಿಳೆಯರ ಜತೆ ಚರ್ಚೆ

08 Jaggu 3
Published on

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಕೋಶದಿಂದ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಸಿ.ವಿ. ರಾಮನ್ ಸಭಾಂಗಣದಲ್ಲಿ ಮಹಿಳಾ ಸಾಧಕರ ಜತೆ ಚರ್ಚಾ ಕಾರ್ಯಕ್ರಮ ನಡೆಯಿತು.

ಬೆಳಗಾವಿಯ ಒಮೆಗಾ ಅಪ್‌ಸೆಟ್ ಸ್ಥಾಪಕಿ ಸಬಿಹಾ ಹಿರಾನಿ, ಸಂಜೀವಿನಿ ಫೌಂಡೇಶನ್‌ನ ಅಧ್ಯಕ್ಷೆ ಡಾ. ಸವಿತಾ ದೇಗಿನಾಳ, ಕರ್ಮಭೂಮಿ ಫೌಂಡೇಶನ್‌ನ ಸಂಸ್ಥಾಪಕಿ, ನಿರ್ದೇಶಕಿ ಡಾ. ಶ್ವೇತಾ ಪಾಟೀಲ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಮೂವರು ಸಾಧಕರೂ ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರು. ಪೂಜಾ ಮೆಳವಂಕಿ ಮತ್ತು ಅಲ್ಫಾಜ್ ಬಾಗವಾನ ನಿರೂಪಿಸಿದರು.

ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಬಲೀಕರಣ ಕೋಶದ ಸಂಚಾಲಕ ಡಾ.ಎಂ.ಎಂ. ಪುರಾಣಿಕ ಸ್ವಾಗತಿಸಿದರು. ಪ್ರಾಜಕ್ತಾ ಬುಗುಟಿ ವಂದಿಸಿದರು. ಅಮೀಶಾ ನಿರೂಪಿಸಿದರು. ಡಾ. ಕೀರ್ತಿ ಬ್ಯಾಡಗಿ ಪರಿಚಯಿಸಿದರು. ಖುಷಿ ಕುನ್ನೆ ನೃತ್ಯ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net