ಮಹಿಳಾ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮ

Published on

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಎಸ್ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಒಂದು ವಾರ ಕಾಲ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ಮಹಿಳಾ ಶಿಕ್ಷಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೂ ಬಹುಮಾನ ವಿತರಿಸಲಾಯಿತು.

ಅತಿಥಿಯಾಗಿದ್ದ ಸುಧಾ ಶೀಲವಂತರ, ಡಾ. ದೀಪ ಎಂ. ಪಾಟೀಲ್ ಮಾತನಾಡಿ, ವಿದ್ಯಾಥಿರ್ಗಳು ಮಹಿಳಾ ಸಾಧಕೀಯರ ಬಗೆಗೆ ತಿಳಿದುಕೊಂಡು ಆಥಿರ್ಕವಾಗಿ ಸಬಲೀಕರಣಗೊಳ್ಳಬೇಕು ಎಂದು ಹೇಳಿದರು.

ಅಲ್ಯುಮ್ನಿ ಅಸೋಸಿಯೇಶನ್ ಮುಖ್ಯಸ್ಥೆ ಡಾ. ಸುನಿತಾ ರಾಣಿ ಹಾಗೂ ಮಹಿಳಾ ಸಬಲೀಕರಣ ಕೋಶದ ಮುಖ್ಯಸ್ಥೆ ಡಾ. ಮಹೇಶ್ವರಿ ಉದಗಟ್ಟಿ, ಪ್ರೊ. ಶಿವಕುಮಾರ್ ಬನ್ನಿಹಟ್ಟಿ, ಇತರರು ಉಪಸ್ಥಿತರಿದ್ದರು.

ಪ್ರಾಚಾರ್ಯ ಸಿಸಿಲಿಯಾ ಡಿಕ್ರೂಸ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿಭಾಗದ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಮಹಿಳಾ ಗೀತೆ ಹಾಡಿದರು. ಮೈಕಾ ಮತ್ತು ಖುಷಿ ಕಾರ್ಯಕ್ರಮ ನಿರೂಪಿಸಿದರು. ಸಲೋಮಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net