ಕೆಸಿಸಿಐನಲ್ಲಿ ಸಾಧಕಿಯರಿಗೆ ಸನ್ಮಾನ 4ರಂದು

img_1743519099326_1-1.jpg
Published on

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಹಿಳಾ ಉದ್ದಿಮೆದಾರರ ಸಮಿತಿ ವತಿಯಿಂದ ಏ. 4ರಂದು ಸಂಜೆ 4ಕ್ಕೆ ಮಹಿಳಾ ದಿನಾಚರಣೆ ಮತ್ತು ಸಾಧಕಿಯರಿಗೆ ಸನ್ಮಾನಿಸುವ "ವೃದ್ಧಿ- 2025' ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಮಿತಿ ಚೇರ್ಮನ್ ನೀಪಾ ಮೆಹ್ತಾ ತಿಳಿಸಿದರು.

ನಗರದ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸ್ಕಾಂ ಎಂಡಿ ವೈಶಾಲಿ ಎಂ.ಎಲ್., ವಾಯವ್ಯ ಸಾರಿಗೆ ಸಂಸ್ಥೆಯ ಎಂಡಿ ಪ್ರಿಯಾಂಗಾ ಎಂ. ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಕಿರಿಯ ಬೋಯಿಂಗ್ ಪೈಲಟ್ ಎಂದು ಗುರುತಿಸಲ್ಪಟ್ಟಿರುವ ಕ್ಯಾಪ್ಟನ್ ಝೊಯಾ ಅಗರವಾಲ್ ಹಾಗೂ ಮಿಸ್ ಇಂಡಿಯಾ ಮತ್ತು ಕಲಾವಿದೆ ಸಿಮ್ರಾನ್ ಅಹುಜಾ ಅವರು ಉದ್ಯಮಶೀಲತೆ, ಮಹಿಳೆಯರಿಗೆ ಇರುವ ಅವಕಾಶಗಳ ಕುರಿತು ಪ್ರಧಾನ ಭಾಷಣ ಮಾಡುವರು ಎಂದರು.

ರಾಯಚೂರು ಮೂಲದ ಬಸವ ತತ್ವ ಪ್ರಚಾರಕಿ, ಚಿಂತಕಿ, ಶರಣೆ ಗಿರಿಜಕ್ಕ ಧರ್ಮರಡ್ಡಿ, ವೈದ್ಯಕಿಯ ಕ್ಷೇತ್ರದ ಜ್ಯೋತಿ ಎಂ. ಹಿರೇಮಠ ಹಾಗೂ ಶಿಲ್ಪಾ ಬಯೋಲಾಜಿಕಲ್ಸ್ ಲಿಮಿಟೆಡ್ ನಿರ್ದೇಶಕಿ ಡಾ. ಕೆ.ಆರ್. ರಾಜಶ್ರೀ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದರು.

ಸಹ ಚೇರ್ಮನ್ ಪಲ್ಲವಿ ಮಲಾನಿ ಮಾತನಾಡಿ, ಸೃಜನಶೀಲತೆ, ಸಂಪರ್ಕ ಹಾಗೂ ಜಯಿಸಿ ಎಂಬ ವಿಷಯದಡಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಮುಂದಿನ ಪೀಳಿಗೆಯ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಪ್ರಧಾನ ಭಾಷಣ ಮಾಡಲಿರುವ ಝೊಯಾ ಹಾಗೂ ಸಿಮ್ರಾನ್ ಅವರು ಸಾಧನೆಗೆ ಇರುವ ದಾರಿಗಳ ಬಗ್ಗೆ ಮಹಿಳೆಯರಿಗೆ ಹಲವು ಸಲಹೆ ನೀಡಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net