

ಮುದಗಲ್: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಸಾಹಿತ್ಯ ಪರಿಷತ್ತು, ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಜಂಟಿಯಾಗಿ ಮಾ.8ರಂದು ಮಹಿಳಾ ದಿನಾಚರಣೆ ನಿಮಿತ್ತ ಕವಿಗೋಷ್ಠಿ, ದತ್ತಿ ಉಪನ್ಯಾಸ ಮತ್ತು ನಾಟಕ ಪ್ರದರ್ಶನವನ್ನು ವಿಜಯ ಮಹಾಂತೇಶ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡರ ಬುಧವಾರ ಹೇಳಿದರು.
ಇದನ್ನೂ ಓದಿ: ಬೀದರ್ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ 8ರಂದು
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ದತ್ತಿ ಉಪನ್ಯಾಸ ಮತ್ತು ದಾಂಪತ್ಯ ಗೀತೆ ನಾಟಕವನ್ನು ಧಾರವಾಡ ತಂಡದಿಂದ ಪ್ರದರ್ಶನ ಮಾಡಲಾಗುತ್ತದೆ. ತಿಮ್ಮಾಪೂರ ಕಲ್ಯಾಣಾಶ್ರಮದ ಮಹಾಂತಸ್ವಾಮಿ ಸಾಲಿಮಠ ಸಾನ್ನಿಧ್ಯ ವಹಿಸುವರು. ಹಿರಿಯ ಸಾಹಿತಿ ಅನಸೂಯಾ ಜಹಗೀರದಾರ ಕೊಪ್ಪಳ ಅಧ್ಯಕ್ಷತೆ ವಹಿಸಲಿದ್ದಾರೆ. ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ ಉದ್ಘಾಟನೆ ಮಾಡಲಿದ್ದಾರೆ. ಉಪನ್ಯಾಸಕರಾಗಿ ಶಶಿಕಾಂತ ಕಾಡ್ಲೂರ, ಮಹಿಳಾ ಸಂಘಟನೆಗಳ ಮುಖ್ಯಸ್ಥರು ಆಗಮಿಸಲಿದ್ದಾರೆ ಎಂದರು. ಕಸಾಪ ಘಟಕದ ಅಧ್ಯಕ್ಷ ಹಾಜಿಮಲಂಗಬಾಬಾ, ಪ್ರಮುಖರಾದ ಯಮನೂರ ನದಾಫ್, ಸಂಗಮೇಶ ಸರಗಣಾಚಾರಿ, ಸುಜಿತಾನಂದ ಇತರರಿದ್ದರು.