

ಕುಂದಾಪುರ: ತಲ್ಲೂರು ಸಂತ ಫ್ರಾನ್ಸಿಸ್ ಆಸಿಸಿ ದೇವಾಲಯದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ದೈವೀ ಕರೆ ಆಯೋಗ ನಿರ್ದೇಶಕ ಅಶ್ವಿನ್ ಆರಾನ್ನಾ ಹಾಗೂ ಚರ್ಚ್ ಧರ್ಮಗುರು ಎಡ್ವಿನ್ ಡಿಸೋಜ ಬಲಿಪೂಜೆ ಸೆರವೇರಿಸಿದರು.
ಅಶ್ವಿನ್ ಆರಾನ್ನ ಶುಭಹಾರೈಸಿದರು. ಕುಂದಾಪುರ ವಲಯದ ಸ್ತ್ರೀ ಆಯೋಗ ಸಚೇತಕಿ ಸಿಂತಿಯಾ ರೋಡ್ರಿಗಸ್ ಹಾಗೂ ಜೂಡಿತ್ ಮೆಂಡೋನ್ಸಾ ಅವರನ್ನು ಸನ್ಮಾನಿಸಲಾಯಿತು. ಪಾಲನಾ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿಗಳು, 20 ಆಯೋಗದ ಸಂಚಾಲಕರು ಹಾಗೂ ಸಿ.ಬಿನು ಉಪಸ್ಥಿತರಿದ್ದರು. ಸ್ತ್ರೀ ಆಯೋಗ ಅಧ್ಯಕ್ಷೆ ಶಾಂತಿ ಮೆಂಡೋನ್ಸಾ ಸ್ವಾಗತಿಸಿದರು. ಕಾರ್ಯದರ್ಶಿ ಸವಿತಾ ಮೆಂಡೋನ್ಸಾ ವಂದಿಸಿದರು. ಆಯೋಗ ಸದಸ್ಯೆ ಪ್ರೆಸಿಲ್ಲಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.