ವಕೀಲರ ಸಂಘದಲ್ಲಿ ಮಹಿಳಾ ದಿನಾಚರಣೆ

court
Published on

ಹುಬ್ಬಳ್ಳಿ: ನ್ಯಾಯಾಂಗದಲ್ಲಿ ಮಹಿಳಾ ವಕೀಲರು, ನ್ಯಾಯಾಧೀಶರು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಧಾರವಾಡ ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾ ವ ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಹೇಳಿದರು.

ಇಲ್ಲಿಯ ವಕೀಲರ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ದಿನವನ್ನು ವಕೀಲರ ಸಂಘದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿರುವುದು ಐತಿಹಾಸಿಕ ಗಳಿಗೆಯಾಗಿದೆ.

ಮಹಿಳೆಯರು ಇಂದು ಉನ್ನತ ಹುದ್ದೆಗಳನ್ನು ಹೊಂದಿ ಸಮಾಜದ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಎಂಟು ಮಹಿಳಾ ನ್ಯಾಯಾಧೀಶರು ಇರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಿ.ಆರ್. ಪಾಟೀಲ ಮಾತನಾಡಿ, ದೇಶದ ಸಂಸ್ಕೃತಿ ಮತ್ತು ಪರಂಪರೆ ಪ್ರಕಾರ ಮನೆಯಲ್ಲಿ ತಾಯಿಗೆ ಪ್ರಥಮ ಸ್ಥಾನ ಇದೆ. ಮಹಿಳಾ ನ್ಯಾಯಾಧೀಶರು, ನ್ಯಾಯವಾದಿಗಳು ನ್ಯಾಯ ದೇವತೆಯ ಸ್ವರೂಪವಾಗಿದ್ದಾರೆ ಎಂದರು.

ಸನ್ಮಾನ: ಧಾರವಾಡ ಜಿಲ್ಲಾ ಇತಿಹಾಸದಲ್ಲಿ ಪ್ರಥಮ ಮಹಿಳಾ ಜಿಲ್ಲಾ ವ ಸತ್ರ ನ್ಯಾಯಾಧೀಶರಾದ ಕೆ.ಜಿ. ಶಾಂತಿ, ನ್ಯಾ. ಸುವರ್ಣಾ ಮಿರ್ಜಿ, ನ್ಯಾ. ಇಂದಿರಾ ಚೆಟ್ಟಿಯಾರ, ನ್ಯಾ. ಪ್ರೀತಿ ಕೆ., ನ್ಯಾ. ಶ್ವೇತಾ ಪಾಟೀಲ, ನ್ಯಾ. ತ್ರಿವೇಣಿ ಇರಗಾರ, ನ್ಯಾ. ಅನಿತಾ ಸಾಲಿ ಹಾಗೂ ಅಭಿಯೋಜಕರಾದ ಅಂಚಟಗೇರಿ, ಗೋವಿಂದಮ್ಮ ಇವರನ್ನು ಸಂಘದ ವತಿಯಿಂದ ಸತ್ಕರಿಸಲಾಯಿತು.

ವಿವಿಧ ವೇಷಭೂಷಣ, ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಬಿ., ನ್ಯಾ. ಜಿ.ಎ. ಮೂಲಿಮನಿ, ನ್ಯಾ. ಎಸ್.ಬಿ. ಹಂದ್ರಾಳ, ನ್ಯಾ. ಚಿನ್ನಣ್ಣವರ ಆರ್.ಎಸ್., ನ್ಯಾ. ಆರ್.ಎಂ. ತಿಳಗಂಜಿ, ಜಿ.ಎಫ್. ಹಿರೇಗೌಡರ, ಎಸ್.ವೈ. ದುಂಡರಡ್ಡಿ, ಎಸ್.ವಿ. ಪೊಲೀಸ್​ಗೌಡ್ರ, ಎಂ.ಎಂ. ಹಳ್ಳಿ, ನಂದಾ ಕಾಶಣ್ಣವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net