ನ್ಯಾಯಾಂಗ ಇಲಾಖೆ ಮಹಿಳಾ ನೌಕರರಿಂದ ಮಹಿಳಾ ದಿನಾಚರಣೆ

Women's Day celebrated by women employees of the Department of Justice
Published on

ಮೈಸೂರು: ನ್ಯಾಯಾಂಗ ಇಲಾಖೆಯ ಮಹಿಳಾ ನೌಕರರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ವತಿಯಿಂದ ನಗರದ ಕಲಾಮಂದಿರದಲ್ಲಿ ಗುರುವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಉಷಾರಾಣಿ ಮಾತನಾಡಿ, ಲಿಂಗ ಸಮಾನತೆ ಬರಬೇಕಾಗಿದೆ. ಗಂಡೆಂದು ಸುಮ್ಮನೆ ಕೂರಿಸುವುದು, ಹೆಣ್ಣೆಂದು ಹೆಚ್ಚಿನ ಕೆಲಸ ನೀಡುವುದು ಸರಿಯಲ್ಲ. ಸಮಾನತೆ ಮನೆಯಿಂದಲೇ ಪ್ರಾರಂಭ ಆಗಬೇಕು. ಹೆಣ್ಣು ಮತ್ತು ಗಂಡು ಪರಸ್ಪರ ಗೌರವಿಸುತ್ತಾ ಮುಂದೆ ಸಾಗಬೇಕು ಎಂದರು.

ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಾವಿತ್ರಿ ಶಿವಪುತ್ರ ಕುಜ್ಜಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಾಧನೆ ತೋರುತ್ತಿದ್ದಾರೆ. ಆ ಮೂಲಕ ಮಹಿಳೆಯರು ಪುರುಷರಿಗಿಂತ ಕಡಿಮೆ ಏನು ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದರು.

3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಭಾಗ್ಯಾ, ಮನಃಶಾಸ್ತ್ರಜ್ಞೆ ಡಾ.ಭಾರತಿ ಕುಲಶೇಖರ್, ಧ್ಯಾನತಜ್ಞೆ ಮನೋರಮಾ, ನೌಕರರಾದ ಭಾರತಿ, ವಸುಧಾ, ಹೇಮಲತಾ, ಗೀತಾ, ರಾಜೇಶ್ವರಿ, ಅನಿತಾಕುಮಾರಿ, ಯಶೋದಾ, ಭಾರತಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net