ವಿಪ್ರ ಮಹಿಳಾ ವೇದಿಕೆಯಿಂದ ಮಹಿಳಾ ದಿನಾಚರಣೆ

hbr-4
Published on

ಹೆಬ್ರಿ: ಹೆಬ್ರಿ ತಾಲೂಕು ವಿಪ್ರ ಮಹಿಳಾ ವೇದಿಕೆ ವತಿಯಿಂದ ಅನಂತ ಪದ್ಮನಾಭ ದೇವರ ಸನ್ನಿಧಿಯಲ್ಲಿ ಮಹಿಳಾ ದಿನಾಚರಣೆ ನಡೆಯಿತು.

ಜಿಲ್ಲಾ ಮಹಿಳಾ ವೇದಿಕೆ ಅಧ್ಯಕ್ಷೆ ಕಾಂತಿರಾವ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಸಂದೀಪ್‌ಕುಮಾರ್ ಮಂಜ ಉದ್ಘಾಟಿಸಿದರು. ವಿಪ್ರ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಶೋಭಾ ಆರ್.ಕಲ್ಕೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಸುಮಂಗಲ ಭಟ್ ಮಹಿಳೆಯರ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದರು.

ಹಿರಿಯರಾದ ಕಸ್ತೂರಿ ನಾರಾಯಣ ಆಚಾರ್ ದಂಪತಿಯನ್ನು ಗೌರವಿಸಲಾಯಿತು. ಹೆಬ್ರಿ ವಲಯಾಧ್ಯಕ್ಷ ರಾಮಕೃಷ್ಣ ಆಚಾರ್, ಜಿಲ್ಲಾ ಯುವವೇದಿಕೆ ಅಧ್ಯಕ್ಷೆ ಪವಿತ್ರಾ ಅಡಿಗ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜ ಉಪಾಧ್ಯಾಯ ಉಪಸ್ಥಿತರಿದ್ದರು. ನಿರ್ಮಲಾ ಆಚಾರ್ ಸ್ವಾಗತಿಸಿದರು. ಸುಗುಣಾ ಬಡಕಿಲ್ಲಾಯ ವಂದಿಸಿದರು. ಕಾರ್ಯದರ್ಶಿ ಅಮಿತಾ ಒಕುಡ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net