

ವಿಜಯಪುರ: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ಹಿರಿಯ ಸಾಹಿತಿ ಮಡಿವಾಳಮ್ಮ ನಾಡಗೌಡ (ಬಳಗಾನೂರ) ಮಾತನಾಡಿ, ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆಗೈಯ್ಯುತ್ತಿದ್ದಾಳೆ. ಮಹಿಳೆ ಸಾಧಿಸದ ಕ್ಷೇತ್ರವೇ ಇಲ್ಲವೆನ್ನಬಹುದೆಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ರೇಖಾ ಪಾಟೀಲ ಮಾತನಾಡಿ, ಮಹಿಳೆ ಕೌಟುಂಬಿಕವಾಗಿ ತಲ್ಲಣಗೊಂಡಿದ್ದಾಳೆ. ಕೆಲವು ಪುರುಷರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಸರ್ಕಾರ ಮೊಬೈಲ್‌ನಲ್ಲಿರುವ ಅಶ್ಲೀಲ ದೃಶ್ಯಗಳನ್ನು ತೆಗೆದುಹಾಕಬೇಕು. ಮಹಿಳೆಯರ ವಿದ್ಯಾಭ್ಯಾಸ ಮಾಡಿ ಬದುಕನ್ನು ಕಟ್ಟಿಕೊಳ್ಳುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂದರು.
ಸಾಹಿತಿ ಕವಿತಾ ಕಲ್ಯಾಣಪ್ಪಗೋಳ ಹಾಗೂ ಶಿಲ್ಪಾ ಭಸ್ಮೆ ಮಾತನಾಡಿದರು.
ಶ್ರೀದೇವಿ ಉತ್ಲಾಸರ, ಶೋಭಾ ಮೇಡೆದಾರ, ಬಾಲ ಕವಯಿತ್ರಿ ಸೌಮ್ಯ ದೊರನಳ್ಳಿ, ಶೋಭಾ ಹರಿಜನ, ಚೈತನ್ಯ ಮುದ್ದೆಬಿಹಾಳ, ಶಾಂತಾ ವಿಭೂತಿ, ಜಯಶ್ರೀ ಹಿರೇಮಠ, ಆಶಾ ಬಿರಾದಾರ, ರಶ್ಮಿ ಬದ್ನೂರ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಅಭಿಷೇಕ ಚಕ್ರವರ್ತಿ, ಸುರೇಶ ಜತ್ತಿ, ರಾಜೇಶ್ವರಿ ಮೋಪಗಾರ, ಲತಾ ಗುಂಡಿ, ಬಿ.ಎಂ. ಅಜೂರ, ಕೆ.ಎಸ್. ಹಣಮಾಣಿ, ಮಹಾದೇವಿ ತೆಲಗಿ, ಶರಣಗೌಡ ಪಾಟೀಲ, ಅಮಸಿದ್ದ ಪೂಜಾರಿ, ಶಿವಾಜಿ ಮಾನೆ, ಬಸನಗೌಡ ಬಿರಾದಾರ, ಪರಶುರಾಮ ಬಗಲಿ, ರಾಜೇಸಾಬ ಶಿವನಗುತ್ತಿ, ಎಂ.ಎಂ. ಹಂದಿಗನೂರ, ಎಂ.ಡಿ. ಬಿಳಿಜಾಡರ, ಬಸವರಾಜ ಹಿರೇಮಠ, ಜಿ.ಎಸ್. ಬಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಶಶಿಕಲಾ ಇಜೇರಿ ಉಪಸ್ಥಿತರಿದ್ದರು
ಸುಜಾತಾ ಹ್ಯಾಳದ ಸ್ವಾಗತಿಸಿದರು. ಮಮತಾ ಮಳಸಾವಳಗಿ ನಿರೂಪಿಸಿದರು. ಡಾ ಸಂಗಮೇಶ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಬಡಿಗೇರ ವಂದಿಸಿದರು.