ಸಿಎನ್‌ಸಿಯಿಂದ ಮಹಿಳಾ ದಿನಾಚರಣೆ

Women's Day by CNC
Published on

ಮಡಿಕೇರಿ:

ಅಂತರರಾಷ್ಟಿçÃಯ ಮಹಿಳಾ ದಿನವಾದ ಶುಕ್ರವಾರ ಕೊಡವ ಮಹಿಳೆಯರ ಸಾಂವಿಧಾನಿಕ ಸಬಲೀಕರಣಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಸಂಘಟನೆ ಧರಣಿ ಸತ್ಯಾಗ್ರಹ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ನಡೆಸಿದ ಸಿಎನ್‌ಸಿ ಪ್ರಮುಖರು ಕೊಡವ ಮಹಿಳೆಯರು ಆದಿಮಸಂಜಾತ ಅತ್ಯಂತ ಸೂಕ್ಷö್ಮ ಕೊಡವ ಬುಡಕಟ್ಟು ಜನಾಂಗದ ವೀರ ಪರಂಪರೆ, ಸಂಸ್ಕೃತಿ ಮತ್ತು ಆಚಾರ ವಿಚಾರಗಳ ಉಳಿವಿಗಾಗಿ ನೀಡಿದ ಕೊಡುಗೆಗಳನ್ನು ಪ್ರತಿಪಾದಿಸಿದರು.

ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ ಈ ಬಾರಿಯ ಅಂತರರಾಷ್ಟಿçÃಯ ಮಹಿಳಾ ದಿನದ ಪ್ರಯುಕ್ತ ವಿಶ್ವಸಂಸ್ಥೆ ವಿಶ್ವ ಮಹಿಳೆಯರ ಹೂಡಿಕೆಯ ಪ್ರಗತಿಯನ್ನು ವೇಗಗೊಳಿಸುವ ಧ್ಯೇಯವಾಕ್ಯವನ್ನು ಘೋಷಿಸಿದೆ. ಇದು ಸಾಕಾರಗೊಳ್ಳಬೇಕಾದರೆ ವಿಶ್ವರಾಷ್ಟç ಸಂಸ್ಥೆಯ ಚಾರ್ಟರ್ ಅಡಿಯಲ್ಲಿ ನಮ್ಮ ರಾಷ್ಟçದ ಇತರ ಮಹಿಳೆಯರಿಗೆ ಸಮಾನವಾಗಿ ಕೊಡವ ಮಹಿಳೆಯರ ಸಾಂವಿಧಾನಿಕ ಸಬಲೀಕರಣ ಅಗತ್ಯವಿದೆ.

ಶಾಸನ ರೂಪಿಸುವ ಸಂಸ್ಥೆಗಳಲ್ಲಿ ಅಂದರೆ ಸಂಸತ್ತು, ರಾಜ್ಯ ಅಸೆಂಬ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಸ್ತಾವಿತ 33 ಪ್ರತಿಶತ ಸೀಟುಗಳಲ್ಲಿ ಕೊಡವ ಮಹಿಳೆಯರಿಗೆ ಪ್ರತ್ಯೇಕ ಆಂತರಿಕ ಕೋಟಾವನ್ನು ನೀಡಬೇಕು. ವಿಶೇಷ ಕಾಳಜಿಯಾಗಿ ಕಾಫಿ ಜಮೀನುಗಳ 10 ಎಕರೆ ಗುತ್ತಿಗೆ ಆಸ್ತಿ ನೀಡುವ ಮೂಲಕ ಕೊಡವ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ ಅವರು, ಕೊಡವ ಬುಡಕಟ್ಟು ಜನಾಂಗದ ಮಹಿಳೆಯರು ಉತ್ತಮ ಕೃಷಿಕರು. ಆದರೆ ದುಃಖದ ಭಾಗವೆಂದರೆ ಅವರಲ್ಲಿ ಶೇ.99 ರಷ್ಟು ಮಂದಿ ತಮ್ಮದೇ ಆದ ಕೃಷಿಭೂಮಿಯನ್ನು ಹೊಂದಿಲ್ಲ. ಈ ಕಾರಣದಿಂದ ಕೊಡವ ಮಹಿಳೆಯರಿಗೆ ಕೃಷಿಯ ಬಗ್ಗೆ ಅಪಾರ ಜ್ಞಾನವಿದ್ದರೂ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡವ ಮಹಿಳೆಯರು ಯೋಧ ಮತ್ತು ಬೇಟೆಯ ಕುಲದ ವಂಶಸ್ಥರು, ಕಾಡು ಮೇಡುಗಳಲ್ಲಿ ವಾಸಿಸುತ್ತಾ ತದನಂತರ ಕೃಷಿಕರಾಗಿ ರೂಪಾಂತರಗೊAಡರು. ಆದ್ದರಿಂದ ಬೇಸಾಯವು ಅವರ ಗುಣಲಕ್ಷಣಗಳಲ್ಲಿ ಒಂದಾಗಿದೆ ಮತ್ತು ಉದ್ಯೋಗವಾಗಿದೆ. ಆದರೆ ಅವರು ಭೂರಹಿತರಾಗಿದ್ದಾರೆ. ನಿಜವಾದ ಅರ್ಥದಲ್ಲಿ ಅವರು ತಮ್ಮ ಸಂಗಾತಿಯ ಕುಟುಂಬದಲ್ಲಿ ಸಂಬಳ ಪಡೆಯದ ಕಾರ್ಮಿಕರಾಗಿದ್ದಾರೆ ಎಂದರು.

2024 ರ ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯ ಗುರುತಾಗಿ ಕೊಡವ ಮಹಿಳೆಯರಿಗೆ ಬಂದೂಕು ವಿನಾಯಿತಿ ಪ್ರಮಾಣಪತ್ರವನ್ನು ಸಮರೋಪಾದಿಯಲ್ಲಿ ಏಕಗವಾಕ್ಷಿ ಯೋಜನೆಯಡಿ ನೀಡುವುದನ್ನು ಸರ್ಕಾರ ವೇಗಗೊಳಿಸಬೇಕು. ಕೊಡವ ಬುಡಕಟ್ಟು ಜನಾಂಗದವರು "ಸಪ್ತಪದಿ"ಯ ತತ್ವಗಳನ್ನು ಪಾಲಿಸದಿರುವುದರಿಂದ ಕಲ್ಯಾಣ ರಾಜ್ಯ ಯೋಜನೆಯ "ಸಪ್ತಪದಿ ಭಾಗ್ಯ" ಕ್ಕೆ ಸಮಾನವಾಗಿ ಕೊಡವತಿ ವಧುವಿಗೆ "ಪತ್ತಾಕ್ ಭಾಗ್ಯ" ನೀಡಬೇಕು ಎಂದು ಒತ್ತಾಯಿಸಿದರು.

ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ ಗಿರೀಶ್, ಅಜ್ಜಿನಿಕಂಡ ಇನಿತಾ ಮಾಚಯ್ಯ, ಮಂದಪAಡ ಗೊಂಬೆ ಮುತ್ತಣ್ಣ, ಅಪ್ಪನೆರವಂಡ ಶಾಂತ ಅಪ್ಪಚ್ಚ, ಪಟ್ಟಮಾಡ ಕುಶ, ಅಳ್ಮಂಡ ಜೈ, ಅಜ್ಜಿಕುಟ್ಟಿರ ಲೋಕೇಶ್, ಕಾಂಡೇರ ಸುರೇಶ್, ಪುಲ್ಲೇರ ಕಾಳಪ್ಪ, ಚೆಂಬAಡ ಜನತ್, ಅರೆಯಡ ಗಿರೀಶ್, ಕಿರಿಯಮಾಡ ಶರೀನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net