

ಗಂಗೊಳ್ಳಿ: ಬಿಲ್ಲವರ ಹಿತರಕ್ಷಣಾ ವೇದಿಕೆ ಮತ್ತು ಕಲಾಶ್ರೀ ಶಿಕ್ಷಣ ಪ್ರೇಮಿಗಳ ಬಳಗದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮೇಲ್‌ಗಂಗೊಳ್ಳಿಯ ಡಾ.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜರುಗಿತು.
ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರಾದ ಫಿಲೋಮಿನಾ ಫರ್ನಾಂಡಿಸ್, ಶೇಷಮ್ಮ, ಶೋಭಾ ಎಸ್., ಕಮಲಾ, ರೇಖಾ ಕೆ., ಸಂಗೀತಾ, ಸಹನಾ ಹಾಗೂ ನಿಖಿತಾ ಅವರನ್ನು ಗೌರವಿಸಲಾಯಿತು. ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ ಟಿ.ಎಲ್., ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಗೋಪಾಲ ಪೂಜಾರಿ, ಅಂಗನವಾಡಿ ಮೇಲ್ವಿಚಾರಕಿ ರೇಖಾ ಕೆ., ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಗುರುರಾಜ್ ಆಚಾರ್ಯ, ಸಹಶಿಕ್ಷಕ ಯೋಗೀಶ್, ಜಿ.ವಿ.ಆರ್.ಲಕ್ಷ್ಮಣ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷೆ ಸವಿತಾ ಖಾರ್ವಿ, ಅರ್ಚನಾ ಮಹಿಳಾ ಮಂಡಲ ಅಧ್ಯಕ್ಷೆ ಜ್ಯೋತಿ ಆನಂದ, ಸುಮಿತ್ರಾ ಈಶ್ವರ, ಈಶ್ವರ ಜಿ.ಉಪಸ್ಥಿತರಿದ್ದರು. ಶ್ರೀಮತಿ ಸ್ವಾಗತಿಸಿದರು. ಸುಮಿತ್ರಾ ಜಿ.ವಂದಿಸಿದರು.