ಮಹಿಳಾ ಸಬಲೀಕರಣದಿಂದ ಪ್ರಗತಿ ಸಾಧ್ಯ

12arsph2ep
????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಅರಸೀಕೆರೆ : ಮಹಿಳಾ ಸಬಲೀಕರಣದಿಂದ ಮಾತ್ರವೇ ಸದೃಢ ಹಾಗೂ ಸಶಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ನಗರಠಾಣೆ ಪಿಎಸ್‌ಐ ಲತಾ ಹೇಳಿದರು.
ನಗರಸಭೆ ಕಚೇರಿ ಬಳಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾನ ಅವಕಾಶಗಳನ್ನು ಸೃಜಿಸುವ ಮೂಲಕ ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸ್ತ್ರೀಯರಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸಮಾಜ ಯೋಚಿಸಬೇಕಿದೆ. ಯುವತಿಯರು, ಗೃಹಿಣಿಯರು ಸ್ವಯಂ ಪ್ರೇರಿತರಾಗಿ ದುಡಿಯುವ ಮಾರ್ಗ ಕಂಡಕೊಂಡಲ್ಲಿ ಉತ್ತಮ ಜೀವನ ನಡೆಸಬಹುದಾಗಿದೆ ಎಂದರು.
ಸರ್ಕಾರ, ಸಂಘ- ಸಂಸ್ಥೆಗಳು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದಲ್ಲಿ ಸದೃಢ ಹಾಗೂ ಸಶಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.
ಪೌರಾಯುಕ್ತ ಬಸವರಾಜ್ ಮಾತನಾಡಿ, ಡಿಸಿ, ಸಿಇಒ, ಎಸ್‌ಪಿ ತಹಸೀಲ್ದಾರ್ ಸೇರಿದಂತೆ ಅನೇಕ ಮಹಿಳಾ ಅಧಿಕಾರಿಗಳು ಜಿಲ್ಲೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅವರು ಸಮರ್ಥ ಆಡಳಿತ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ನಗರಸಭೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸಿರುವುದು ಶ್ಲಾಘನೀಯ ಎಂದರು. ತಹಸೀಲ್ದಾರ್ ರುಖಿಯಾ ಬೇಗಂ ವಿವಿಧ ಅಟೋಟಗಳಲ್ಲಿ ವಿಜೇತರಾದ ನಗರಸಭೆ ಸದಸ್ಯೆಯರು ಹಾಗೂ ಸಿಬ್ಬಂದಿಗೆ ಬಹುಮಾನ ವಿತರಿಸಿದರು.
ಪರಿಸರ ಅಭಿಯಂತರ ರವಿಕುಮಾರ್, ನಗರಸಭೆ ಕಚೇರಿ ವ್ಯವಸ್ಥಾಪಕಿ ಕಲಾವತಿ, ನಗರಸಭೆ ಸದಸ್ಯೆಯರಾದ ಪ್ರೇಮಾ ಮಲ್ಲಿಕಾರ್ಜುನ್, ಅನ್ನಪೂರ್ಣಾ, ಶ್ವೇತಾ ರಮೇಶ್, ಸುಜಾತಾ ರಮೇಶ್, ಮಧುರಾ ಹರೀಶ್, ಅನಿತಾ, ಸುಮಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net