ಸುಂಟಿಕೊಪ್ಪದಲ್ಲಿ ಮಹಿಳಾ ದಿನಾಚರಣೆ

08sunti03
Published on

ಸುಂಟಿಕೊಪ್ಪ: ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಮತ್ತು ಸುಂಟಿಕೊಪ್ಪ ಕೊಡವ ಕೂಟದ ಲೋಪಮುದ್ರೆ ಪೊಮ್ಮಕ್ಕಡ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಮಹಿಳಾ ದಿನವನ್ನು ಆಚರಿಸಲಾಯಿತು.

ಸುಂಟಿಕೊಪ್ಪ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಹಿರಿಯ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಉದ್ಘಾಟಿಸಿದರು. ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷ ಬಾಚರಣಿಯಂಡ ರಾಣು ಅಪ್ಪಣ್ಣ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ದಿನಾಚರಣೆ ಕುರಿತು ವಿಚಾರ ಮಂಡನೆ, ಉಮ್ಮತಾಟ್, ಹಾಸ್ಯಮಂಜರಿ, ವಾಲತ್ತಾಟ್ ಪೈಪೋಟಿ ಸೇರಿದಂತೆ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆದವು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹೊರ ತಂದ ಪುಸ್ತಕಗಳ ಮಾರಾಟ ಹಾಗೂ ಪ್ರದರ್ಶನ ನಡೆಯಿತು.
ಲೋಪಮುದ್ರ ಪೊಮ್ಮಕ್ಕಡ ಸಂಘದ ಮಾಜಿ ಅಧ್ಯಕ್ಷೆ ಬೊಳಂದಡ ಸರೋಜಿನಿ ದೇವಯ್ಯ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷ ಬಾಚರಣಿಯಂಡ ರಾಣು ಅಪ್ಪಣ್ಣ, ಡಾಲಿ ಕರುಂಬಯ್ಯ , ಸುನಿತಾ ಗಿರೀಶ್, ಲೀಲಾಮೇದಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net