ಸಂದಿಗ್ಧ ಪರಿಸ್ಥಿತಿಯಲ್ಲಿ ಒತ್ತಡ ನಿಭಾಯಿಸುವ ಗುಣ : ಡಾ.ವಾಣಿ ಸುಗುಣಕುಮಾರ್ ಬಣ್ಣನೆ

23
Published on

ಬೆಳ್ತಂಗಡಿ: ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ, ಯುವವಾಹಿನಿ ಮಹಿಳಾ ಸಂಚಾಲನಾ ಸಮಿತಿ ಬೆಳ್ತಂಗಡಿ ತಾಲೂಕು ನೇತೃತ್ವದಲ್ಲಿ, ಬೆಳ್ತಂಗಡಿಯ ಶ್ರೀಗುರು ನಾರಾಯಣ ಸ್ವಾಮಿ ಸಭಾಭವನದಲ್ಲಿ ವಿಶ್ವ ಮಹಿಳಾ ದಿನ ಆಚರಿಸಲಾಯಿತು

ಹಿರಿಯ ನಾಟಿವೈದ್ಯ ಡೀಕಮ್ಮ ಅಲ್ಯೊಟ್ಟು ಉದ್ಘಾಟಿಸಿದರು. ವೈದ್ಯೆ ಡಾ.ವಾಣಿ ಸುಗುಣಕುಮಾರ್ ಮಾತನಾಡಿ, ಮಹಿಳೆಯರು ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಒತ್ತಡ ನಿಭಾಯಿಸುವ ಗುಣ ಮೈಗೂಡಿಸಿಕೊಳ್ಳಬೇಕು ಎಂದರು.

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ರಶ್ಮಿ ನಾರಾವಿ ಹಾಗೂ ಹಿರಿಯ ನಾಟಿ ವೈದ್ಯರಾದ ಡೀಕಮ್ಮ ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ಸಂಚಾಲನಾ ಸಮಿತಿ ಪ್ರಧಾನ ಸಂಚಾಲಕಿ ಲೀಲಾವತಿ ಪಣಕಜೆ, ಘಟಕದ ಕಾರ್ಯದರ್ಶಿ ಮಧುರಾ ರಾಘವ, ಮಹಿಳಾ ನಿರ್ದೇಶಕಿ ಪ್ರಮೀಳಾ ಮಾಲೂರು, ಮಹಿಳಾ ಸಂಚಾಲನ ಸಮಿತಿಯ ಕಾರ್ಯದರ್ಶಿ ಶಾಂಭವಿ ಮುಂಡೂರು ಉಪಸ್ಥಿತರಿದ್ದರು.

ಸೇವಂತಿ ನಿರಂಜನ್ ಸ್ವಾಗತಿಸಿದರು. ಸುಧಾಮಣಿ ಆರ್. ಮತ್ತು ಜಿತೀಕ್ಷ ಕಾರ್ಯಕ್ರಮ ನಿರೂಪಿಸಿದರು. ಬೇಬಿಂದ್ರ ವಂದಿಸಿದರು. ಮಹಿಳಾ ಸದಸ್ಯರಿಗೆ ಹಲವಾರು ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net