ಶರಣ ಸಂಸ್ಕೃತಿ ವಿಚಾರಧಾರೆಗೆ ಮಹಿಳೆಯರ ಕೊಡುಗೆ ಅಪಾರ

bir 2 (2)
Published on

ಬೀರೂರು: ಸಮ ಸಮಾಜ ನಿರ್ಮಾಣದ ಶರಣರ ಆಶಯಗಳಿಗೆ ದನಿಯಾಗಿ ಶರಣ

ಸಂಸ್ಕೃತಿಯ ಬೇರನ್ನು ಗಟ್ಟಿಗೊಳಿಸುವಲ್ಲಿ ವಚನಗಾರ್ತಿಯರ ಕೊಡುಗೆ ಅಪಾರ ಎಂದು

ಯೋಗ ಮತ್ತು ಆಧ್ಯಾತ್ಮ ಚಿಂತಕ ಕುರುಬರಹಳ್ಳಿ ಶ್ರೀ ರಾಮ ಗುರೂಜಿ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ದೇವಾಲಯ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್

ಮತ್ತು ವಿವಿದ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಶರಣ ಸಂದೇಶ

ಕಾರ್ಯಕ್ರಮದಲ್ಲಿ ಅನುಭವ ಮಂಟಪ ವಿಚಾರಧಾರೆಗಳ ಕುರಿತು ಉಪನ್ಯಾಸ ನೀಡಿ,

ಸಾಂಪ್ರದಾಯಿಕ ಸಂಕೋಲೆಗಳ ಕೌಟುಂಬಿಕ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ

ಮಹಿಳೆ ಪುರುಷರಿಗೆ ಸರಿ ಸಮಾನವಾಗಿ ಸಮಾನ ಗೌರವದಿಂದ ಬದುಕನ್ನು ಕಟ್ಟಿಕೊಳ್ಳುವಲ್ಲಿ

ಅನುಭವ ಮಂಟಪ ನೀಡಿದ ಕೊಡುಗೆ ಅಜರಾಮರ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ ಪ್ರಧಾನ ಸಂಚಾಲಕ ಸಂಪತ್‌ಕುಮಾರ್ ಮಾತನಾಡಿ, ಶರಣರ

ವಿಚಾರ ಧಾರೆಗಳು ನಮ್ಮೊಳಗಿನ ಆತ್ಮ ಜ್ಞಾನ ಜಾಗೃತಿಗೆ ಪ್ರೇರಕವಾಗಿದ್ದು , ತಾಲೂಕು

ಘಟಕ ಶರಣ ಸಂಸ್ಕೃತಿಯ ಬೇರನ್ನು ಗಟ್ಟಿಗೊಳಿಸುವ ಹೆಜ್ಜೆ ಇಟ್ಟು ಯಶಸ್ಸಿಯಾಗಿದ್ದು,

ವಿಚಾರಶೀಲ ಮನಸ್ಸುಗಳ ಹೆಚ್ಚಳಕ್ಕೆ ಪ್ರೇರಕವಾಗಿದೆ ಎಂದರು.

ಅಕ್ಕಮಹಾದೇವಿ ಮಹಿಳಾ ಸಮಾಜ ಪ್ರಧಾನ ಕಾರ್ಯದರ್ಶಿ ವಿಶಾಲಾ ಷಡಾಕ್ಷರಿ

ಮಾತನಾಡಿ, ಮಹಿಳಾ ಸಬಲಿಕರಣಕ್ಕೆ 12ನೇ ಶತಮಾನದ ಶರಣೆಯರ ಕೊಡುಗೆ ಅಪಾರ.

ಅನುಭವ ಮಂಟಪದ ಅನುಭಾವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ

ನಮ್ಮೆಲ್ಲರ ಮೇಲಿದೆ ಎಂದರು.

ಇಂದಿರಾ ಬಸವರಾಜ್, ಗೀತಾ ಜ್ಞಾನಮೂರ್ತಿ, ಪತ್ರೆ ಶೈಲಜಾ ಸದಾಶಿವನ್, ತಾಲೂಕು

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವಿರೂಪಾಕ್ಷಪ್ಪ, ಹೋಬಳಿ ಘಟಕ ಅಧ್ಯಕ್ಷ ಜಿ.ಈ

ಶಿವಲಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net