ಅಭಿವೃದ್ಧಿಗೆ ಸ್ತ್ರೀಯರ ಕೊಡುಗೆ ಅನನ್ಯ

7ckd1
Published on

ಚಿಕ್ಕೋಡಿ: ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಛಾಪು ಮೂಡಿಸಿದ್ದು, ದೇಶ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅವರ ಕೊಡುಗೆ ಅನನ್ಯವಾಗಿದೆ ಎಂದು ಡಾ.ಪ್ರಿಯಾಂಕಾ ಚೌಗಲಾ ಹೇಳಿದರು.

ತಾಲೂಕಿನ ಕೆರೂರು ಸರ್ಕಾರಿ ಪಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಇನ್ನರ್‌ವೀಲ್ ಕ್ಲಬ್ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತ ತಪಾಸಣೆ ಹಾಗೂ ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಫಾಸ್ಟ್ ಫುಡ್ ಸೇವನೆಯಿಂದ ಉದರ ಸಂಬಂಧಿತ ಸಮಸ್ಯೆ, ಕ್ಯಾನ್ಸರ್‌ದಂತಹ ಕಾಯಿಲೆ, ಅಜೀರ್ಣ ಹಾಗೂ ಗರ್ಭಕೋಶ ಸಮಸ್ಯೆ ತಲೆದೋರುತ್ತಿವೆ. ಹೀಗಾಗಿ, ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇನ್ನರ್‌ವೀಲ್ ಕ್ಲಬ್ ಸದಸ್ಯೆ ವಿಜಯಲಕ್ಷ್ಮೀ ಕೋಲಾರ, ಡಾ.ಬಾಹುಬಲಿ ಕಾತ್ರಾಳಿ ಮಾತನಾಡಿದರು. ಡಾ.ಬಾಹುಬಲಿ ಕತ್ರಾಳಿ ಮತ್ತು ರೂಪಾಲಿ ಕತ್ರಾಳೆ 100 ಮಕ್ಕಳಗೆ ಉಚಿತವಾಗಿ ರಕ್ತ ತಪಾಸಣೆ ಮಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಪ್ರಾಸ್ತಾವಿಕ ಮಾತನಾಡಿದರು. ಭಾಗ್ಯಶ್ರೀ ತೊಗ್ಗಿ, ಸುವರ್ಣ ಬಬಲಿ, ಶಂಕರ ತೇಲಿ ಇತರರಿದ್ದರು. ಗಾಯತ್ರಿ ಪರಗೌಡ ನಿರೂಪಿಸಿದರು. ಶಿವಾನಂದ ಹರಕೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net