

ಇಳಕಲ್ಲ : ಇಲ್ಲಿನ ಶ್ರೀಮಠದಲ್ಲಿ ಶ್ರಾವಣ ಮಾಸದ ಶರಣ ಸಂಸ್ಕೃತಿ ಮಹೋತ್ಸವ ಅಂಗವಾಗಿ ಸೆ.9 ರಂದು ಮಹಿಳಾ ಗೋಷ್ಠಿಯನ್ನು ವಿವಿಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಹಿಳಾ ಗೋಷ್ಠಿಯಲ್ಲಿ ಅನುಭವವನ್ನು ಬೀದರ್ ದತ್ತಗಿರಿ ಮಹಾರಾಜ ಪದವಿ ಕಾಲೇಜಿನ ಪ್ರಾಚಾರ್ಯೆ ಜಯದೇವಿ ಯಡ್ಲಾಪುರೆ ನೀಡಲಿದ್ದಾರೆ.
ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ದೇವಮ್ಮ ಪಾಟೀಲ, ರೇಖಾ ನವಲಿಹಿರೇಮಠ, ರೇಶ್ಮಾ ಶೆಟ್ಟರ ಅಕ್ಕನ ಬಳಗದ ಅಧ್ಯಕ್ಷೆ ಸುವರ್ಣ ಗೊಂಗಡಶೆಟ್ಟಿ ಭಾಗವಹಿಸಿ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಶಾಸಕ ವೀರಣ್ಣ ಚರಂತಿಮಠ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ವಹಿಸಲಿದ್ದಾರೆ ಎಂದು ಅಕ್ಕನ ಬಳಗದ ಕಾರ್ಯದರ್ಶಿ ಸುನೀತಾ ಅಂಗಡಿ ತಿಳಿಸಿದ್ದಾರೆ.