ಗೊಲ್ಲರಹಟ್ಟಿಗೆ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ

FotoJet
Published on

ತಾತ್ಕಾಲಿಕ ಮೊಬೈಲ್​ ಶೌಚಗೃಹ ಸ್ಥಾಪನೆ ಮಾಡಲು ನಾಗಲಕ್ಷಿ$್ಮ ಚೌದರಿ ಸೂಚನೆ

 ಪಾವಗಡ: ತಾಲೂಕಿನ ನಿಡಗಲ್​ ಹೋಬಳಿಯ ಮುಗದಾಳಬೆಟ್ಟದ ಗೊಲ್ಲರಹಟ್ಟಿಗೆ ಭೇಟಿ ಮಾಡಿ, ಮಹಿಳೆಯರ ಸಮಸ್ಯೆಗಳನ್ನು ನೋಡಿ ಆತಂಕ ವ್ಯಕ್ತಪಡಿಸಿ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ$್ಮ ಚೌದರಿ, ತಕ್ಷಣಕ್ಕೆ ತಾತ್ಕಾಲಿಕವಾಗಿ ಮೊಬೈಲ್​ ಶೌಚಗೃಹ ವ್ಯವಸ್ಥೆ ಮಾಡುವಂತೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಜಾನಕೀ ರಾಮ್​ ಅವರಿಗೆ ಸೂಚಿಸಿದರು.

ಗೊಲ್ಲರಹಟ್ಟಿಯಲ್ಲಿ ಮೂಲ ಸೌಕರ್ಯಗಳಾದ ಚರಂಡಿ, ರಸ್ತೆ, ವಸತಿ, ಅಂಗನವಾಡಿ ಹಾಗೂ ಶೌಚಗೃಹ ಇಲ್ಲದಿರುವ ಬಗ್ಗೆ ಏ.28ರಂದು 'ಬಯಲಲ್ಲೇ ಶೌಚ, ಸೀರೆ ಮರೆಯಲ್ಲಿ ಸ್ನಾನ, ಗುಡಿಸಲಲ್ಲೇ ವಾಸ' ಎಂಬ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆ ನಡೆಸಲಾಯಿತು.

ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಸಂಪೂರ್ಣವಾಗಿ ಗೊಲ್ಲರಹಟ್ಟಿಯ ಸಮಸ್ಯೆಗಳ ಬಗ್ಗೆ ವಿವರವಾಗಿ ವರದಿ ಮಾಡಿದ ವಿಜಯವಾಣಿ ಪತ್ರಿಕೆಗೆ ತುಂಬು ಸಭೆಯಲ್ಲೇ ಅಭಿನಂದಿಸಿದರು. ಸ್ವಾತಂತ್ರ$್ಯ ಭಾರತದಲ್ಲಿ ಇಂದಿಗೂ ಮಹಿಳೆಯರಿಗೆ ಇಂತಹ ದಯನೀಯ ಪರಿಸ್ಥಿತಿ ಇರುವುದು ನಮ್ಮನ್ನು ಸಾಮಾಜಿಕವಾಗಿ ತಲೆ ತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿ ನಾಗಲಕ್ಷಿ$್ಮ ಚೌದರಿ, ಸಂವಿಧಾನದಡಿಯಲ್ಲಿ ಪ್ರತಿಯೋಬ್ಬ ನಾಗರಿಕನಿಗೂ ಮೂಲ ಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ನೀವ್ಯಾರೂ ಸಹ ಗಾಬರಿಯಾಗುವ ಅವಶ್ಯಕತೆ ಇಲ್ಲ ಸರ್ಕಾರ ತಮಗೆ ಸಕಲ ಸೌಲಭ್ಯಗಳನ್ನು ಶೀಘ್ರದಲ್ಲೇ ಒದಗಿಸುತ್ತದೆ ಎಂದು ಭರವಸೆ ನೀಡಿದರು.

ಸರ್ವೇ 166/1 ರ ಪೈಕಿ 2.30 ಗುಂಟೆ ಜಮೀನು ವಿವಾದ ಪಾವಗಡ ಸಿವಿಲ್​ ನ್ಯಾಯಲಯದಲ್ಲಿದ್ದು, ಜೂ.16ಕ್ಕೆ ತೀಮಾರ್ನವಿದೆ. ಅಂತಿಮ ತಿಮಾರ್ಣದ ನಂತರ ಗೊಲ್ಲರಹಟ್ಟಿಗೆ ತಮಗೆಲ್ಲಾ ಬೇಕಾದ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ವಸತಿ, ನಿವೇಶನ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಗೊಲ್ಲರಹಟ್ಟಿ ಹುಣ್ಣುಮಕ್ಕಳ ಅನುಕೂಲಕ್ಕಾಗಿ ತಕ್ಷಣಕ್ಕೆ ಎರಡು ದಿನದೊಳಗೆ ತಾತ್ಕಾಲಿಕ ಮೊಬೈಲ್​ ಶೌಚಗೃಹ ಮತ್ತು ಹೈಮಾಸ್​ ದೀಪ ಅಳವಡಿಸಿ ವರದಿ ಸಲ್ಲಿಸುವಂತೆ ತಾಪಂ ಇಒಗೆ ಸೂಚಿಸಿದರು.

ಮುಗದಾಳಬೆಟ್ಟ ಗ್ರಾಮದ ಗೊಲ್ಲರಹಟ್ಟಿಯ ಗ್ರಾಮಸ್ಥರು ವಿಜಯವಾಣಿ ಪತ್ರಿಕೆಗೆ ಧನ್ಯವಾದ ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಗೊಲ್ಲರಹಟ್ಟಿಗೆ ಮೊದಲು ಮೂಲ ಸೌಕರ್ಯ ಒದಗಿಸಿ. ಸರ್ಕಾರ ಅಂದಾಜು 3 ಕೋಟಿ ರೂ. ವಿಶೇಷ ಅನುದಾನ ಒದಗಿಸಿ ಅಭಿವೃದ್ಧಿ ಪಡಿಸಬೇಕಿದೆ. ಇಲ್ಲದಿದ್ದಲ್ಲಿ ಇದೇ ಮಹಿಳಾ ಆಯೋಗದ ಸಹಕಾರದೊಂದಿಗೆ ರೈತ ಸಂಘ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಿಪಿಐ ಸುರೇಶ್​, ತಾಲೂಕು ವೈದ್ಯಾಧಿಕಾರಿ ಬಾಬು, ಇಂದ್ರಾಣಮ್ಮ, ಶರತ್​ ಕುಮಾರ್​, ಪಿಡಿಒ ಮಂಜುನಾಥ, ಕಾಡುಗೊಲ್ಲ ಸಂಘದ ಅಧ್ಯಕ್ಷ ಬೋರಣ್ಣ, ಗ್ರಾಮದ ಮುಖಂಡ ಭಾಸ್ಕರ್​, ನಾಗರಾಜು, ರೈತ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net