ಮಹಿಳಾ ಕಾಲೇಜು ಅಭಿವೃದ್ಧಿಗೆ ಆದ್ಯತೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭರವಸೆ

Clg
Published on

ಮಂಡ್ಯ: ಮುಂದಿನ ದಿನಗಳಲ್ಲಿ ನಗರದ ಮಹಿಳಾ ಸರ್ಕಾರಿ ಕಾಲೇಜಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಗುರುವಾರ ಆಯೋಜಿಸಿದ್ದ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಈ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದಿಂದ ವಿದ್ಯಾರ್ಥಿಗಳು ಬರುತ್ತಾರೆ. ಅಂತೆಯೇ ಕಾಲೇಜಿನ ಅಭಿವೃದ್ಧಿಪಡಿಸುವ ಬಗ್ಗೆ ಶಾಸಕರು ಮತ್ತು ಸಚಿವರು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು. ಸರ್ಕಾರಿ ಕಾಲೇಜಿನಲ್ಲಿ ಓದಿದವರೇ ದೊಡ್ಡ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿಯರು ಓದಿನೊಂದಿಗೆ ಗುರಿ ಸಾಧಿಸಲು ಹಠ ಬೆಳಸಿಕೊಳ್ಳಬೇಕು. ಜತೆಗೆ ಸಂಸ್ಕಾರ ಮನೋಭಾವ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ ಮಾತನಾಡಿ, ಇಂದಿನ ದಿನಗಳಲ್ಲಿ ವೇದಿಕೆಗಳಿಗೆ ಸಾಧಕರನ್ನು ಕರೆಸಿ ಸ್ಪೂರ್ತಿಧಾಯಕ ಮಾತುಗಳನ್ನು ಸಂದೇಶವಾಗಿ ನೀಡಿಸುತ್ತಾರೆ. ಆದ್ದರಿಂದ ಮುಂದಿನ ದಿನದಲ್ಲಿ ನೀವೆ ಸಾಧನೆ ಮಾಡಿ ಅತಿಥಿಗಳಾಗಿ ಬರಬೇಕು. ಇದರಿಂದ ಪಾಲಕರು ಮತ್ತು ಉಪನ್ಯಾಸಕರಿಗೆ ಖುಷಿ ತರುತ್ತದೆ ಎಂದರು.
ಕಾರ್ಯಕ್ರಮವನ್ನು ರಂಗನಿರ್ದೇಶಕ ಜನಾರ್ದನ್‌ಕೊಂಡ್ಲಿ ಉದ್ಘಾಟಿಸಿದರು. ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಎಂ.ಶ್ರೀನಿವಾಸ್, ಪ್ರಾಂಶುಪಾಲ ಡಾ.ಆರ್.ದಶರಥ, ಅಧ್ಯಾಪಕ ಸಾಂಸ್ಕೃತಿಕ ಸಂಚಾಲಕಿ ಡಾ.ಎಂ.ಬಿ.ಪ್ರಮೀಳಾ, ಕ್ರೀಡಾ ಸಂಚಾಲಕ ಡಾ.ಬರಗೂರಪ್ಪ, ರಮೇಶ್, ಡಾ.ಕೆಂಪಮ್ಮ, ಪ್ರೊ.ವೈ.ಕೆ.ಭಾಗ್ಯ, ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಶಾರದಾ, ಲೇಖನಾ, ಐಶ್ವರ್ಯಾ, ಮಹಾಲಕ್ಷ್ಮೀ, ಚೈತನ್ಯ, ಪ್ರಕೃತಿ, ವೈಷ್ಣವಿ, ಸ್ಪಂದನಾ, ನವ್ಯಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net