ಮಹಿಳೆ ನಿರ್ಣಾಯಕ

Published on

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬಹುತೇಕ ರಾಜಕೀಯ ಪಕ್ಷಗಳು ಟಿಕೆಟ್​ ನೀಡುವ ಸಂದರ್ಭದಲ್ಲಿ ಮಹಿಳೆ ಯರತ್ತ ಗಮನ ಹರಿಸಿಲ್ಲ. ಪ್ರಮುಖ ಪಕ್ಷಗಳಿಂದ ಘೋಷಣೆಯಾಗಿರುವ ಅಭ್ಯಥಿರ್ಗಳ ಪಟ್ಟಿಯಲ್ಲಿ ಸ್ತ್ರೀಯರು ಸ್ಥಾನ ಪಡೆದಿಲ್ಲ.

ಆದರೆ, ವಿಶೇಷ ಎಂದರೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ.
ಮೂರು ಕ್ಷೇತ್ರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಅಧಿಕವಾಗಿದ್ದರೂ ಟಿಕೆಟ್​ ಪಡೆಯುವ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿದ್ದಾರೆ ಎಂದು ಹೇಳಬಹುದು.

ಧಾರವಾಡ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಮತದಾರರ ಪೈಕಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದೆ. ಸಂಖ್ಯೆಯಲ್ಲಿ ಸ್ತ್ರೀಯರು ಮೇಲುಗೈ ಸಾಧಿಸಿದ್ದರೂ ರಾಜಕೀಯ ಪಕ್ಷಗಳು ಅವರನ್ನು ಟಿಕೆಟ್​ನಿಂದ ದೂರ ಇಟ್ಟಿವೆ.

ಹುಬ್ಬಳ್ಳಿ -ಧಾರವಾಡ ಸೆಂಟ್ರಲ್​, ಪೂರ್ವ, ಪಶ್ಚಿಮ ವಿಧಾನಸಭಾ ಕ್ಷೇತ್ರಗಳು ಹಾಗೂ ಧಾರವಾಡ ಗ್ರಾಮೀಣ, ಕಲಟಗಿ, ಕುಂದಗೋಳ ಮತ್ತು ನವಲಗುಂದ ಸೇರಿ ಏಳು ವಿಧಾನಸಭಾ ಕ್ಷೇತ್ರಗಳು ಧಾರವಾಡ ಜಿಲ್ಲೆಯಲ್ಲಿವೆ.

ಇವುಗಳ ಪೈಕಿ ಹುಬ್ಬಳ್ಳಿ& ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರಗಳು ಅಂದರೆ ಹು&ಧಾ ಸೆಂಟ್ರಲ್​, ಪೂರ್ವ ಹಾಗೂ ಪಶ್ಚಿಮ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಇರುವುದು ಕಂಡು ಬರುತ್ತದೆ.

ನಗರ ಪ್ರದೇಶದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ನಗರೀಕರಣ, ಉತ್ತಮ ಶಿಕ್ಷಣದ ಸೌಲಭ್ಯ, ಮೂಲ ಸೌಕರ್ಯಗಳು ಇತ್ಯಾದಿ ಕಾರಣದಿಂದ ನಗರ ಪ್ರದೇಶದಲ್ಲಿ ವಾಸಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಣ್ಣು ಮಕ್ಕಳಿಗೆ ನಗರ ಪ್ರದೇಶ ಸುರತ ಎಂಬ ಭಾವನೆಯೂ ಇದಕ್ಕೆ ಕಾರಣ ಇರಬಹುದು.

ಲಿಂಗ ತಾರತಮ್ಯ ಮುಂತಾದ ಸಾಮಾಜಿಕ ಸಮಸ್ಯೆಗಳು ನಗರಕ್ಕಿಂತ ಹಳ್ಳಿಗಳಲ್ಲಿ ಹೆಚ್ಚಾಗಿದೆ. ಗ್ರಾಮಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಈ ಎಲ್ಲ ಕಾರಣಗಳಿಂದಾಗಿ ನಗರ ವ್ಯಾಪ್ತಿಯಲ್ಲಿ ಮಹಿಳಾ ಮತದಾರರು ಹೆಚ್ಚಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಕ್ಷೇತ್ರವಾರು ಮತದಾರರ ವಿವರ


ಕ್ಷೇತ್ರ ಮಹಿಳೆಯರು ಪುರುಷರು ಇತರೆ ಒಟ್ಟು
ಹು-ಧಾ ಪೂರ್ವ 1,04,199 1,03,226 14 2,07,439
ಹು-ಧಾ ಸೆಂಟ್ರಲ್​ 1,23,952 1,21,872 38 2,45,862
ಹು-ಧಾ ಪಶ್ಚಿಮ 1,31,736 1,28,085 4 2,59,825
ಧಾರವಾಡ 1,05,142 1,06,190 9 2,11,341
ನವಲಗುಂದ 1,01,407 1,03,964 6 2,05,377
ಕುಂದಗೋಳ 89,927 95,015 7 1, 84,949
ಕಲಟಗಿ 93,444 99,170 7 1,92,621

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net