

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದಲ್ಲಿ ಸಣ್ಣ ಕೈಗಾರಿಕೆ ಕ್ಷೇತ್ರದಲ್ಲಿ ಶೇ. 20ರಷ್ಟು ಮಹಿಳೆಯರು ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಸಹಾಯಕ ಪ್ರಾಧ್ಯಾಪಕಿ ಡಾ. ಸುಪ್ರಿಯಾ ಬೆಳವಿ ಹೇಳಿದರು.
ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ನಗರದ ರಂಗಾಯಣ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಮತಿ ಲಲಿತಾಂಬ ವೃಷಭೇಂದ್ರಸ್ವಾಮಿ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸಂಸಾರದ ಜವಾಬ್ದಾರಿ ನಿರ್ವಹಿಸುವುದರ ಜತೆಗೆ ತಮ್ಮ ಪ್ರತಿಭೆ, ಕೌಶಲ ಉಪಯೋಗಿಸಿಕೊಂಡು ಸಾಧನೆಯ ಹಾದಿಯಲ್ಲಿ ತಮ್ಮ ಹೆಜ್ಜೆ ಮೂಡಿಸುವುದು ಬಹಳ ಮುಖ್ಯ ಸಂಗತಿ. ಸರ್ಕಾರದ ಯೋಜನೆಗಳನ್ನು ಹೆಸರಿಸಿ ಅಂಕಿ ಅಂಶಗಳ ಜತೆಗೆ ಉತ್ತಮ ಮಾಹಿತಿ ನೀಡಿದರು.
ದತ್ತಿ ದಾನಿ ಡಾ. ಎಸ್.ಎಂ. ಶಿವಪ್ರಸಾದ ಮಾತನಾಡಿದರು. ಡಾ ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಸುಧಾ ಹುಲಗೂರ, ಸುಜಾತಾ ಹಡಗಲಿ, ಸಂಘದ ಪದಾಧಿಕಾರಿಗಳು, ಇತರರು ಇದ್ದರು.
ಸುನೀತಾ ಮೂರಶಿಳ್ಳಿ ಸ್ವಾಗತಿಸಿದರು. ಬಸವಂತಿ ಇಂಗಳಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಉಷಾ ಗದ್ದಗಿಮಠ ನಿರೂಪಿಸಿದರು. ಮೇಘಾ ಹುಕ್ಕೇರಿ ವಂದಿಸಿದರು.