ಮಹಿಳೆಯನ್ನು ಗುರಾಯಿಸಿದ, ಕೇಳಿದಕ್ಕೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಕಿಡಿಗೇಡಿ

6cmy3
Published on

ಚಿಕ್ಕಬಳ್ಳಾಪುರ: ಮಹಿಳೆಯನ್ನು ಗುರಾಯಿಸಿದ್ದರ ಬಗ್ಗೆ ತಾಯಿಗೆ ದೂರು ಹೇಳಿದ್ದಾಳೆ ಎಂದು ಆಕ್ರೋಶಗೊಂಡ ಕಿಡಿಗೇಡಿಯೊಬ್ಬ, ಯುವತಿಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾನೆ.
ಚಿಂತಾಮಣಿ ನಗರದ ಅಂಬೇಡ್ಕರ್ ಬಡಾವಣೆಯ ಯುವರಾಜ್ (೩೨) ಆರೋಪಿ. ಗಾಯಾಳು ಯುವತಿ ಸುಧಾ (೨೮). ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ಹಿನ್ನೆಲೆ
ಚಿಂತಾಮಣಿ ನಗರದ ಅಂಬೇಡ್ಕರ್ ಬಡಾವಣೆಯಲ್ಲಿನ ಸುಧಾಳ ಅತ್ತಿಗೆಯನ್ನು ಯುವರಾಜ್ ಪ್ರತಿನಿತ್ಯ ಗುರಾಯಿಸಿ ನೋಡುತ್ತಿದ್ದ. ಹಾಗೆಯೇ ರೇಗಿಸುತ್ತಿದ್ದ ಎನ್ನಲಾಗಿದೆ. ಇದರ ಬಗ್ಗೆ ಸಂತ್ರಸ್ಥ ಮಹಿಳೆಯು ಅಳಲು ತೋಡಿಕೊಂಡಿದ್ದನ್ನು ಆರೋಪಿಯ ತಾಯಿ ನಾರಾಯಣಮ್ಮಳ ಗಮನಕ್ಕೆ ಸುಧಾ ತಂದಿದ್ದಾಳೆ. ಇದರಿಂದ ಕೋಪಗೊಂಡ ಯುವರಾಜ್ ಮನೆಯೊಳಗೆ ನುಗ್ಗಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜತೆಗೆ ಕಲ್ಲಿನಿಂದ ಹಣೆಗೆ ಹೊಡೆದು ಗಾಯಗೊಳಿಸಿದ್ದಾನೆ. ಅದೃಷ್ಟವಶಾತ್ ಕಣ್ಣಿಗೆ ಗಂಭೀರ ಪೆಟ್ಟು ಬಿದ್ದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net