ಸಮಾಜದ ದೃಷ್ಟಿಕೋನ ಬದಲಾಗಲಿ, ಸಾಹಿತಿ ಸುನಂದಾ ಕಡಮೆ ಸಲಹೆ

IMG-20231001-WA0018-1.jpg
Published on

ಹುಬ್ಬಳ್ಳಿ: ಹೆಣ್ಣನ್ನು ಕೇವಲ ಭೋಗದ ವಸ್ತುವನ್ನಾಗಿ ನೋಡುವ ದೃಷ್ಟಿಕೋನ ಬದಲಾಗಬೇಕು. ಅವಳಿಗೂ ಮನಸ್ಸು, ಭಾವನೆಗಳು ಇವೆ. ಇವತ್ತಿನ ಅತ್ಯಾಧುನಿಕ ತಂತ್ರಜ್ಞಾನದ ಕಾಲದಲ್ಲೂ ಎರಡನೇ ದರ್ಜೆ ನಾಗರಿಕಳನ್ನಾಗಿ ಮಾಡಿದ ಸಮಾಜದ ಭಾವನೆ ಬದಲಾಗದಿರುವುದು ದುರದೃಷ್ಟಕರ ಎಂದು ಸಾಹಿತಿ ಸುನಂದಾ ಕಡಮೆ ಹೇಳಿದರು.

ನಗರದ ಎಪಿಎಂಸಿ ಶ್ರಮಿಕ ಭವನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ಸಂಘಟಿಸಿದ್ದ ಧಾರವಾಡ ಜಿಲ್ಲಾ ದುಡಿಯುವ ಮಹಿಳೆಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಚ್ಚತಾಂದೋಲನದ ಬದಲು ಸರ್ಕಾರ ನಿತ್ಯ ಕಸ ಗೂಡಿಸುವ, ದುಡಿಯುವ ಮಹಿಳೆಯರಿಗೆ ಒಂದು ಗೌರವಯುತ ಬದುಕು ಕಟ್ಟಿಕೊಡಲು ಪ್ರಯತ್ನಿಸಬೇಕು ಎಂದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಮಾಲಿನಿ ಮೇಸ್ತಾ ಮಾತನಾಡಿ, ಕುಟುಂಬದ ಒಳಗೆ ಮತ್ತು ಹೊರಗೆ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿರುವ ಮಹಿಳೆಯರು ಚಂದ್ರಯಾನ-3 ಉಡಾವಣೆಯ ನಿರ್ವಹಣೆಯಿಂದ ಹಿಡಿದು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ದುಡಿಯುವ ಮಹಿಳೆಯಾಗಿ ಶೋಷಣೆ, ತಾರತಮ್ಯ, ವಂಚನೆ, ಹಿಂಸೆ ಮತ್ತು ದೌರ್ಜನ್ಯಗಳಿಗೆ ಬಲಿಯಾಗುತ್ತಿದ್ದಾಳೆ ಎಂದು ವಿಷಾದಿಸಿದರು.

ದುಡಿಯುವ ಮಹಿಳೆಯರ 16 ಅಂಶಗಳ ಹಕ್ಕೊತ್ತಾಯಗಳನ್ನು ಸಮಾವೇಶದಲ್ಲಿ ಮಂಡಿಸಿ ಅಂಗೀಕರಿಸಲಾಯಿತು.

ಅಖಿಲ ಭಾರತ ವಕೀಲರ ಒಕ್ಕೂಟದ ಸುಜಾತಾ ಬೆಸ್ತರ, ಕೆವಿಜಿ ಬ್ಯಾಂಕ್ ಅಧಿಕಾರಿಗಳ ಸಂದ ಅಶ್ವಿನಿ ಬಡಿಗೇರ, ರೈತ ಮುಖಂಡ ಬಿ.ಎಸ್. ಸೊಪ್ಪಿನ ಮಾತನಾಡಿದರು.

ಮುಖಂಡರಾದ ಸುನಂದಾ ಚಿಗರಿ, ಕ್ಕೀರವ್ವ ತೆಂಬದಮನಿ, ಬಸವಣ್ಣೆಪ್ಪ ನೀರಲಗಿ, ಎ.ಎಂ. ಖಾನ್, ಸುಭದ್ರಾ ದಾಸರ, ಶೋಭಾ ಮೂಲಿಮನಿ, ಪ್ರೇಮವ್ವಾ ಅಣ್ಣಿಗೇರಿ, ಲಕ್ಷ$್ಮವ್ವ ಹೊಸೂರಿ, ಕಲಾವತಿ ಲಕಮಾಪುರ ಭಾಗವಹಿಸಿದ್ದರು.

ಬಿಸಿಯೂಟ ನೌಕರರ ಸಂದ ಜಿಲ್ಲಾಧ್ಯಕ್ಷೆ ಚನ್ನಮ್ಮ ಡೊಳ್ಳಿನ ಅಧ್ಯತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದಶಿರ್ ಮಹೇಶ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಸಿದ್ದಪ್ಪ ಅಂಬಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net