ಬೈಕ್ ರ‍್ಯಾಲಿಯಲ್ಲಿ ಗೆದ್ದು ಬೀಗಿದ ಮಹಿಳೆಯರು

New Byke Rally New
Published on

ಹುಬ್ಬಳ್ಳಿ : ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ‘ವುಮೆನ್ಸ್ ಆನ್ ವೀಲ್ಸ್, ಅನ್ ಸ್ಟಾಪೇಬಲ್ ಫೋರ್ಸ್’ ಸಂದೇಶದೊಂದಿಗೆ ನಗರದಲ್ಲಿ ಶನಿವಾರ ಮಹಿಳಾ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.

100 ಕ್ಕೂ ಹೆಚ್ಚು ಮಹಿಳೆಯರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. 18 ರಿಂದ 25, 26 ರಿಂದ 40, 41 ರಿಂದ 55, 56 ಹಾಗೂ ನಂತರದ ವಯೋಮಿತಿಯ ವಿಭಾಗಗಳಲ್ಲಿ ಬೈಕ್ ಹಾಗೂ ಸ್ಕೂಟರ್, ಕಾರುಗಳ ಜತೆ ಪಾಲ್ಗೊಂಡ ಯುವತಿಯರು, ನಾರಿಯರು ರ‍್ಯಾಲಿಯ ಜತೆಗೆ ವಿವಿಧ ಮನರಂಜನಾ ಸ್ಪರ್ಧೆಯಲ್ಲೂ ಭಾಗವಹಿಸಿ ಬಹುಮಾನ ಗೆದ್ದು ಬೀಗಿದರು.

ಇಲ್ಲಿನ ಬಿವಿಬಿ ಆವರಣದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಬೈಕ್ ಚಲಾಯಿಸುವ ಮೂಲಕ ರ‍್ಯಾಲಿಗೆ ಚಾಲನೆ ನೀಡಿದರು. ವಿಜೇತರಿಗೆ ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಬಹುಮಾನ ವಿತರಿಸಿದರು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ ರಾಜೇಶ್ವರಿ ವಾಸುಕಿ, ಕಾರ್ಯದರ್ಶಿ ಶ್ರೀವಲ್ಲಿ ಹೆಬಸೂರ, ಕ್ಲಬ್ ಸದಸ್ಯರಾದ ಶ್ರೀದೇವಿ ರೂಗಿ, ಶ್ರಾವಣಿ ಪವಾರ, ಜ್ಯೋತಿ ಯರಗಟ್ಟಿ, ರಾಧಿಕಾ ಗೋಖಲೆ, ರೀಟಾ ಹಂಡಾ, ರೋಟರಿ ಡಿಸ್ಟ್ರಿಕ್ಟ್ ಅಧಿಕಾರಿ ವಾಸುಕಿ ಸಂಜಿ, ರೋಟರಿ ಜಿಲ್ಲಾ ಸಮನ್ವಯ ಸಮಿತಿ ಅಧಿಕಾರಿ ಮಂಜುನಾಥ ಹೊಂಬಳ ಹಾಗೂ ಇತರರು ರ‍್ಯಾಲಿಯ ನೇತೃತ್ವ ವಹಿಸಿದ್ದರು.

ಸ್ವರ್ಣ ಗ್ರೂಪ್ ಆಫ್ ಕಂಪನಿ, ತನೈರಾದ ಪ್ರೊಡಕ್ಟ್ ಆಫ್ ಟಾಟಾ ಗ್ರೂಪ್ ಟೈಟಲ್ ಪ್ರಾಯೋಜಕತ್ವದೊಂದಿಗೆ ರ‍್ಯಾಲಿ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net